September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ

ಬೆಳ್ತಂಗಡಿ: ಶಿರಾಡಿ ಘಾಟ್ ಚೆಕ್ ಪೋಸ್ಟ್ ಬಳಿ ಸರಣಿ ಅಪಘಾತ ನಡೆದ ಘಟನೆ ಇಂದು ಜೂ.29 ಮಧ್ಯಾಹ್ನ ನಡೆದಿದೆ.

ಗೂಡ್ಸ್ ಹೊತ್ತ ಟೆಂಪೋ, ಐರಾವತ ಬಸ್, ರಾಜಹಂಸ ಬಸ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ಸನ್ನು ಗೂಡ್ಸ್ ಹೊತ್ತ ಟೆಂಪೋ ಓವರ್ ಟೇಕ್ ಮಾಡುವ ಭರದಲ್ಲಿ ದುರ್ಘಟನೆ ಸಂಭವಿಸಿತು. ಓವರ್ ಟೇಕ್ ಮಾಡುವ ಸಂದರ್ಭ ಎದುರಿನಿಂದ ರಾಜಹಂಸ ಬಸ್ ಬರುತ್ತಿದ್ದು, ಟೆಂಪೋ ಚಾಲಕ ನಿಯಂತ್ರಣ ಕಳೆದುಕೊಂಡು ರಾಜಹಂಸಕ್ಕೆ ಡಿಕ್ಕಿ‌ ಹೊಡೆದು, ಹಳ್ಳಕ್ಕೆ ಬಿದ್ದ ಘಟನೆ ನಡೆದಿದೆ.

ಇನ್ನೊಂದೆಡೆ ರಾಜಹಂಸ ಹಾಗೂ ಐರಾವತ ಬಸ್ ಮುಖಾಮುಖಿ ಡಿಕ್ಕಿಯಾದವು.

ಸ್ಥಳದಲ್ಲಿ ಟ್ರಾಫಿಕ್ ದಟ್ಟಣೆಯಾಗಿದ್ದು, ಎರಡು ಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಚಾರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

Related posts

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ದಿನಾಚರಣೆ

Suddi Udaya

ಡಿ 19-20: ಉಜಿರೆ ಶ್ರೀ ಧ.ಮಂ.ಅ.ಹಿ. ಪ್ರಾ. ಶಾಲೆಗೆ ಶಾಲಾ ಶತಮಾನೋತ್ಸವ ಸಂಭ್ರಮ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ರಂಗಕಲೆಗಳ ಸ್ವರೂಪ ಕಾರ್ಯಕ್ರಮ

Suddi Udaya

ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಬಂಗಾಡಿ ಶ್ರೀ ಹಾಡಿ ದೈವ ದೈವಸ್ಥಾನ:ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಎಸ್ ಮುಕುಂದ ಸುವರ್ಣ

Suddi Udaya
error: Content is protected !!