April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಪ್ಪಾರಪಳಿಕೆ ವಿಶ್ವ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೊಕ್ಕಡ ವಲಯ ಉಪ್ಪಾರಪಳಿಕೆ ವಿಶ್ವ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ಮೋಹನ ದಾಸರವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಷಾ ರವರು ತಗಟೆ ಸೊಪ್ಪಿನ ದೋಸೆಯನ್ನು ಹೊಯ್ದು ಆಹಾರದಲ್ಲಿರುವಂತಹ ಪೋಷಕಾಂಶಗಳ ಬಳಕೆಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಮನ್ವಯುಧಿಕಾರಿಯವರಾದ ಮಧುರ ವಸಂತ್ ರವರು ಜ್ಞಾನವಿಕಾಸ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿಯನ್ನು ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಅಧ್ಯಕ್ಷ ಕುಶಾಲಪ್ಪ ಗೌಡ ಹಾಗೂ ಉಪಾಧ್ಯಕ್ಷ ರಮೇಶ್ ಗೌಡ ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ರೋಹಿಣಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶೋಭಾ ಸ್ವಾಗತಿಸಿ, ಭವಾನಿ ಧನ್ಯವಾದವಿತ್ತರು.

Related posts

ಸೋಮಂತಡ್ಕದಲ್ಲಿ ರಾಮನಾಮ ಸಂಕೀರ್ತನೆ ಕಾರ್ಯಕ್ರಮ: ಕರಸೇವಕ ಸುರೇಶ್ ಭಟ್ ಕೊಲ್ಯ ರವರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಚುನಾವಣಾ ಅರಿವು ಸ್ಪರ್ಧೆಗಳ ಉದ್ಘಾಟನೆ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Suddi Udaya

ಕಳೆಂಜ ರಾಜು ಜೋಸೆಫ್ ಅವರ ಸಾವು ಪ್ರಕರಣ ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಮಗನಿಂದ ಠಾಣೆಗೆ ದೂರು

Suddi Udaya

ನಾಳ ಯಕ್ಷಕೂಟದ ವತಿಯಿಂದ ಯಕ್ಷಗಾನ ವೈಭವ

Suddi Udaya

ನ.7: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!