ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗದ ಅಧಿಕಾರಿಗಳೊಂದಿಗೆ ಅದಾಲತ್ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಜು.1ರಂದು ಎಸ್.ಡಿ.ಎಂ ಸಭಾಭವನದಲ್ಲಿ ನಡೆಯಿತು.
ಕಾಯ೯ಕ್ರಮದಲ್ಲಿ ಎಂಎಲ್ಸಿ ಪ್ರತಾಪಸಿಂಹ ನಾಯಕ್, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡಿ.ಸಿ ರಾಜೇಶ್ ಶೆಟ್ಟಿ, ಪುತ್ತೂರು ವಿಭಾಗದ ಡಿ.ಸಿ ಅಮಲಿಂಗಯ್ಯ ವಸು ಪೂಜಾರಿ, ಕೆಎಸ್ಸಾರ್ಟಿಸಿ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಧಮ೯ಸ್ಥಳದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗುವ ಬಸ್ ಗಳು, ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಗಳ ಓಡಾಟ ಬಗ್ಗೆ ನಾಗರಿಕರು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬರಬೇಕು, ಶನಿವಾರ ಗ್ರಾಮೀಣ ಪ್ರದೇಶಗಳಿಗೆ ಶಾಲಾ ಮಕ್ಕಳ ಅನುಕೂಲವಾಗುವ ರೀತಿಯಲ್ಲಿ ಬಸ್ ಬರಬೇಕು ಎಂದು ಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು.
ಬೆಳ್ತಂಗಡಿ – ವೇಣೂರು ಸರಕಾರಿ ಬಸ್, ಬೆಳ್ತಂಗಡಿ – ಪೆರಾಡಿ, ಕಾಶಿಪಟ್ಣ ಬಸ್, ಪಟ್ರಮೆ, ದಿಡುಪೆ, ನೆರಿಯ, ಕಾಯ೯ತ್ತಡ್ಕ ಮೊದಲಾದ ಪ್ರದೇಶಗಳಲ್ಲಿ ಬಸ್ಸಿನ ಬೇಡಿಕೆ ವ್ಯಕ್ತವಾಯಿತು.
ಸಭೆಯಲ್ಲಿ ವಾಣಿ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ, ಸುಧಾಕರ ಅರಿಸಿನ ಮಿಕ್ಕಿ, ರತ್ನಾಕರ್ ಬುಣ್ಣನ್, ಭಾರತಿ ಶೆಟ್ಟಿ ಕುವೆಟ್ಟು, ಮಾಧವ ಶಿಲಾ೯ಲು, ದಿನೇಶ್ ಖಂಡಿಗಾ, ಆಶಾ ಸಲ್ದಾನಾ, ದೀಕ್ಷಿತ್ ದಿಡುಪೆ, ಶಿಶಿಲ ಗ್ರಾ.ಪಂ ಅಧ್ಯಕ್ಷ, ಮೊದಲಾದವರು ಸೇರಿದಂತೆ ಹಲವು ಮಂದಿ ಬೇಡಿಕೆ ಸಲ್ಲಿಸಿದರು.