ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕುಂಟಿನಿಯಿಂದ ನಡ ಗ್ರಾಮದ ಪುತ್ರಬೈಲು ಮೂಲಕ ಬೆಳ್ತಂಗಡಿ ಮತ್ತು ಕಿಲ್ಲೂರಿಗೆ ಸಂಪರ್ಕ ಮಾಡುವ ಕಿರಿದಾದ ಮಣ್ಣಿನ ಮತ್ತು ಕಾಂಕ್ರಿಟ್ ರಸ್ತೆಯಿದ್ದು ಮೊನ್ನೆಯಿಂದ ನಿರಂತರ ಬಾರೀ ಮಳೆಯ ಕಾರಣದಿಂದ ರಸ್ತೆ ಬದಿ ಎರಡು ಕಡೆಗಳಲ್ಲಿ ಮಣ್ಣು ಕುಸಿದು ಅಪಾಯವನ್ನು ಆಹ್ವಾನಿಸುವ ರೀತಿಯಾಗಿರುತ್ತದೆ..
ಈಗಾಗಲೇ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವುದರಿಂದ ಲಘು ವಾಹನಗಳು,ಸರಕು ತುಂಬಿದ ಪಿಕಪ್ ಗಳು ಹೆಚ್ಚಾಗಿ ಈ ರಸ್ತೆಯಲ್ಲಿ ಸಾಗುವುದರಿಂದ ಅವಘಡಗಳು ಸಂಭವಿಸುವುದಕ್ಕಿಂತ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿದರೆ ಸೂಕ್ತವೆಂದು ಆ ಪ್ರದೇಶದ ಯೂಸುಫ್ ಹಾಗೂ ಸ್ಥಳೀಯರ ಒತ್ತಾಯವಾಗಿದೆ.