25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ : ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

ಉಜಿರೆ: ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದ ಶಿಕ್ಷಣ ಅತಿ ಮುಖ್ಯವಾಗಿದೆ. ಬರೀ ವಿದ್ಯೆ ಪಡೆದರೆ ಸಾಲದು; ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ವಿದ್ಯೆಯು ಯಾರಿಂದಲೂ ಕಸಿಯಲಾಗದ ಆಸ್ತಿ. ಜೀವನದಲ್ಲಿ ವಿದ್ಯೆ ಅತಿದೊಡ್ಡ ಸಂಪತ್ತು. ಈ ಸಂಪತ್ತು ಮುಂದಿನ ಜೀವನದಲ್ಲಿ ಇನ್ನಷ್ಟು ಹೆಚ್ಚಿಸಿಕೊಳ್ಳಿ ಎಂದರು. ಇಲ್ಲಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯಲ್ಲಿ ಗುಣಮಟ್ಟದ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಇದು ನಿಮ್ಮ ಮುಂದಿನ ಉದ್ಯೋಗಕ್ಕೆ ದಾರಿದೀಪವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಲಾಯಿಲ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ-ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಸುರೇಶ್ ಮೊಯಿಲಿ ಇವರು ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.

ಕಂಪ್ಯೂಟರ್ ತರಬೇತಿಯು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಯೋಜನೆಯಡಿ ನೋಂದಾಯಿತವಾಗಿದ್ದು, ಕೌಶಲ್ಯ ಯೋಜನೆಯಡಿ ಪ್ರಮಾಣೀಕೃತ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು. ಒಟ್ಟು 30 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದುಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸೋಮನಾಥ್ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಂಪ್ಯೂಟರ್ ತರಬೇತುದಾರರಾದ ಜಯಶ್ರೀ ಇವರು ನಿರ್ವಹಣೆ ಮಾಡಿ, ವಿದ್ಯಾರ್ಥಿಗಳಿಗೆ ಶುಭಕೋರಿದರು.

Related posts

ಉಜಿರೆ: ಸ್ನೇಹ ಕಿರಣ್ ಬೇಬಿ ಸಿಟ್ಟಿಂಗ್ ಗೆ ಮರ ಬಿದ್ದು ಹಾನಿ, ಅಪಾಯದಿಂದ ಪಾರಾದ ಮಕ್ಕಳು

Suddi Udaya

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಅ.17ರಂದು ವಿದ್ಯುತ್ ನಿಲುಗಡೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಬೆಳ್ತಂಗಡಿ ತಾ| ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಮೊದಲ ಸುತ್ತಿನಲ್ಲೇ ಏಮ್ಸ್ ಗೆ ಆಯ್ಕೆ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶ್ರೀ ಧ ಮo ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!