25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಯಾಗಿ ಸೇವಾ ನಿವೃತ್ತಿ ಹೊಂದಿದ ಸ್ಯಾಮುವೆಲ್ ಎಂ.ಐ. ನೆಲ್ಯಾಡಿರವರಿಗೆ ಸನ್ಮಾನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಕೊಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಸ್ಯಾಮುವೆಲ್ ಎಂ.ಐ ನೆಲ್ಯಾಡಿ ಅವರಿಗೆ ಜೂ.30ರಂದು ಮಂಗಳೂರಿನ ಕಮಿಷನರ್ ಆಫೀಸ್ ನಲ್ಲಿ ಇಲಾಖೆಗೆ ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.


1993 ರಿಂದ 2024ರ ವರೆಗೆ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಮಂಗಳೂರಿನ ಸಂಚಾರಿ ಪೂರ್ವ ಪೊಲೀಸ್ ಠಾಣೆ, ಸುಬ್ರಮಣ್ಯ, ಕಡಬಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಹೆಡ್ ಕಾನ್ ಸ್ಟೇಬಲ್ ಆಗಿ ಭಡ್ತಿ ಹೊಂದಿ ಜಿಲ್ಲಾ ಎಸ್.ಪಿ ಕಚೇರಿಯಲ್ಲಿ ಪಾಸ್ ಪೋರ್ಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಧರ್ಮಸ್ಥಳ ಆರಕ್ಷಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಎ ಎಸ್ ಐ ಆಗಿ ಪುಂಜಾಲಕಟ್ಟೆ ಠಾಣೆ, ಬಳಿಕ ಕಳೆದ 3 ವರ್ಷಗಳಿಂದ ಧರ್ಮಸ್ಥಳ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಿಐಪಿ ರಿಂಗ್ ರೌಂಡ್ ಕಮಾಂಡೋ ತರಬೇತಿ ಹೊಂದಿದ್ದ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಇಂಟೆಲಿಜೆನ್ಸ್ ವಿಭಾಗದಲ್ಲಿ ನಿರ್ವಹಿಸಿದ ಸೇವೆಗೆ ಪೊಲೀಸ್ ವರಿಷ್ಟಾಧಿಕಾರಿಗಳ ವಿಶೇಷ ಪ್ರಶಂಸೆಗೆ ಭಾಜನರಾಗಿದ್ದರು.


ಜಿಲ್ಲೆಯಲ್ಲಿ ನಡೆದ ಕೆಲವು ಕಳ್ಳತನ ಪ್ರಕರಣಗಳನ್ನು ಭೇದಿಸಿ ಆಗಿನ ಎಸ್ ಪಿ ಸುಬ್ರಮಣ್ಯೇಶ್ವರ ರಾವ್ ಹಾಗೂ ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರ್ ರವರ ವಿಶೇಷ ಪುರಸ್ಕಾರ ಪಡೆದಿದ್ದರು. ತನ್ನ ನಿಷ್ಠೆ, ಸಮಯ ಬದ್ಧತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.


ಪ್ರಸ್ತುತ ಪತ್ನಿ ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಿಸ್ಸಿ.ಕೆ.ಎ, ಪುತ್ರ ಮರ್ಚೆಂಟ್ ನೇವಿಯಲ್ಲಿ ಉದ್ಯೋಗದಲ್ಲಿರುವ ಅಜೇಯ್, ಸೊಸೆ ಸಹನಾ, ಪುತ್ರಿ ಅನನ್ಯ ಅವರೊಂದಿಗೆ ಹೊಸಮಜಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

Related posts

ಇತಿಹಾಸ ಪ್ರಸಿದ್ದ ನಿಡಿಗಲ್ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಯಶೋಧರ ಗೌಡ ಗುರಿಪಳ್ಳ ಆಯ್ಕೆ

Suddi Udaya

ಜೆಸಿಐ ಮಡಂತ್ಯಾರು ವಿಜಯ 2024 ರ ಶಾಶ್ವತ ಯೋಜನೆಗಳ ಆನಾವರಣ

Suddi Udaya

ಯುವವಾಹಿನಿ ವೇಣೂರು ಘಟಕ ಹಾಗೂ ಶ್ರೀ.ಗು.ನಾ. ಸ್ವಾ.ಸೇ. ಸಂಘ ಕೊಕ್ರಾಡಿ ಇದರ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ ಹಾಗೂ ನಾಟಿ ವೈದ್ಯರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ತನ್ನ ವಿರುದ್ಧ ಯಾರೂ ಮಾತನಾಡುವವರು ಇಲ್ಲ ಎಂಬ ದುರಾಂಕಾರ ಮಹೇಶ್ ಶೆಟ್ಟಿಯವರಲ್ಲಿದೆ ಅವರದು ಶೇ 20 ಮಾತ್ರ ಹಿಂದುತ್ವ ಶೇ 80 ರೌಡಿಸಂ ಆಗಿದೆ: ಶಶಿರಾಜ್ ಶೆಟ್ಟಿ ಗುರುವಾಯನಕೆರೆ

Suddi Udaya

ಬೆಳ್ತಂಗಡಿ ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ಕಾಯಕಲ್ಪ ನೀಡಿ, ಕಾಮಗಾರಿಯ ಸಂಪೂರ್ಣ ಪ್ರಯೋಜನ ನಗರದ ಜನರಿಗೆ ತ್ವರಿತವಾಗಿ ದೊರೆಯುವಂತೆ ಒತ್ತಾಯಿಸಿ ಪ್ರತಾಪ್ ಸಿಂಹ ನಾಯಕ್‌ ರಿಂದ ಸಚಿವ ಭೈರತಿ ಸುರೇಶ್ ರವರಿಗೆ ಮನವಿ

Suddi Udaya
error: Content is protected !!