22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಭಾರತೀಯ ಭೂ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಊರಿಗೆ ಆಗಮಿಸಿದ ಯೋಧ ವಿಕ್ರಮ್ ಜೆ.ಎನ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಗೇರುಕಟ್ಟೆ: ಭಾರತೀಯ ಭೂ ಸೇನೆಯಲ್ಲಿ 20 ವರ್ಷ ಭಾರತಾಂಬೆಯ ಸೇವೆಗೈದು ನಿವೃತ್ತಿ ಹೊಂದಿ ಊರಿಗೆ ಆಗಮಿಸಿದ ನ್ಯಾಯತರ್ಪು ಗ್ರಾಮದ ವಂಜಾರೆ ಯೋಧ ವಿಕ್ರಂ ಜೆ.ಎನ್. ರವರಿಗೆ ಅಭಿನಂದನಾ ಕಾರ್ಯಕ್ರಮ ಜು. 03 ರಂದು ಗೇರುಕಟ್ಟೆ ಸಹಕಾರಿ ಭವನದಲ್ಲಿ ನಡೆಯಿತು.

ಬೆಳಿಗ್ಗೆ ಬೆಳ್ತಂಗಡಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಅಭಿನಂದನಾ ಸಮಿತಿಯ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆಯನ್ನು ವಹಿಸಿದರು.

ಈ ವೇಳೆ ಕಳಿಯ, ನ್ಯಾಯತರ್ಪು, ಓಡಿಲ್ನಾಳ ಅಭಿನಂದನಾ ಸಮಿತಿಯಿಂದ ಹಾಗೂ ಎಲ್ಲ ಸಂಘ ಸಂಸ್ಥೆಗಳಿಂದ ಯೋಧ ವಿಕ್ರಂ ಜೆ.ಎನ್ ದಂಪತಿಯನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಂ., ಬೆಳ್ತಂಗಡಿ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಮೇಜರ್ ಜನರಲ್ ಎಂ.ವಿ. ಭಟ್, ಮಾವಿನಕಟ್ಟೆ ಸಂತ ಅನ್ನಾರವರ ಚರ್ಚ್, ಫಾದರ್ ಬೆರ್ನಾಡ್,, ಬೆಳ್ತಂಗಡಿ ಮಾಜಿ ಸೈನಿಕರ ಸಂಘ ಅಧ್ಯಕ್ಷ ಮಹಮ್ಮದ್ ರಫಿ, ನಿವೃತ್ತ ಹಾಸನ ಸೈನಿಕ ಕ್ಯಾಪ್ಟನ್ ಬೆಟ್ಟೇ ಗೌಡ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಪರಪ್ಪು ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಪೆಲತ್ತಳಿಕೆ, ಸದಸ್ಯರಾದ ತಂಗಚ್ಚನ್ ಸುರೇಶ್ ಗೌಡ, ಸುಬ್ರಮಣಿ, ದಿನೇಶ್ ಗೌಡ, ಯೋಧನ ಪೋಷಕರಾದ ಶ್ರೀಮತಿ ನಾಗವೇಣಿ ಮತ್ತು ಜನಾರ್ಧನ ಪೂಜಾರಿ ವಂಜಾರೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಧ್ಯಕ್ಷರು, ಸಂಚಾಲಕರು, ಕೋಶಾಧಿಕಾರಿ ಮತ್ತು ಕಳಿಯ, ನ್ಯಾಯತರ್ಪು, ಓಡಿಲ್ನಾಳ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ಸುರೇಶ ಆರ್. ಎನ್ ಸ್ವಾಗತಿಸಿ, ನೇವಿಲ್ ಸ್ಟಿವನ್ ಮೋರಸ್ ಧನ್ಯವಾದವಿತ್ತರು.

Related posts

ಕಾಡಾನೆಗಳ ಹಾವಳಿ ತಡೆಗಟ್ಟುವ ಕುರಿತು ಮಾಹಿತಿ – ಪ್ರಾತ್ಯಕ್ಷಿಕೆ

Suddi Udaya

ಬೆಳ್ತಂಗಡಿ: ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪರ ತೆಂಕಕಾರಂದೂರುನಲ್ಲಿ ಮಹಿಳಾ ಕಾರ್ಯಕರ್ತರಿಂದ ಮತಯಾಚನೆ

Suddi Udaya

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ವಸಂತ ಮಜಲು, ಉಪಾಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Suddi Udaya

ಶಾಲಾ ವಾಹನ ಡಿಕ್ಕಿ: ಪಾದಾಚಾರಿ ಕಡಿರುದ್ಯಾವರ ನಿವಾಸಿ ಸುರೇಶ್‌ ನಾಯ್ಕ ಮೃತ್ಯು

Suddi Udaya
error: Content is protected !!