31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಮತ್ತು ಬೆಳ್ತಂಗಡಿ ತಾಲೂಕಿನ ಎರಡನೇ ಮಸೀದಿ ಎಂದು ಖ್ಯಾತಿ ಪಡೆದ ಕಿಲ್ಲೂರು ಮುಹಿಯದ್ದೀನ್ ಜುಮಾ ಮಸ್ಜಿದ್‌ನ ನವೀಕರಣಕ್ಕೆ ಶಿಲಾನ್ಯಾಸ ಹಾಗೂ ತಾತ್ಕಾಲಿಕ ಮಸ್ಜಿದ್ ಸ್ಥಳಾಂತರ ಮತ್ತು ವಕ್ಫ್ ನಿರ್ವಹಣಾ ಕಾರ್ಯಕ್ರಮ ಜು. 5 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದತ್ ಕೂರ ತಂಙಳ್ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು ವಹಿಸಿದ್ದರು.
ಜಮಾಅತ್ ಧರ್ಮ ಗುರುಗಳಾದ ಪಿ.ಬಿ ಶಂಶೀರ್ ಸಖಾಫಿ ಕಾರ್ಯಕ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಕಾಜೂರು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಖ್ ಕಾಜೂರು, ಕಿಲ್ಲೂರು ಮಸ್ಜಿದ್ ಆಡಳಿತಾಧಿಕಾರಿ ಹಾಗೂ ಮಾಜಿ ಸೈನಿಕ ಮುಹಮ್ಮದ್ ರಫೀ ಬೆಳ್ತಂಗಡಿ, ಜಮಾಅತ್ ಉಪಾದ್ಯಕ್ಷ ಹಮೀದ್ ಅಮ್ಮಿ, ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ, ಜೊತೆ ಕಾರ್ಯದರ್ಶಿ ಹಂಝತ್, ಸದಸ್ಯರಾದ ಮುಹಮ್ಮದ್ ಪುತ್ತುಮೋನು, ಹನೀಫ್ ಹೆಚ್.ಎನ್, ಬದ್ರುದ್ದೀನ್ ಕಿಲ್ಲೂರು, ಮುಹಮ್ಮದ್ ಮಣ್ಣಗುಂಡಿ , ಅಶ್ರಫ್ ಶ್ರವಣಗುಂಡ, ಹನೀಫ್ ಮಲ್ಲಿಗೆಮನೆ , ಎಸ್.ಜೆ.ಎಮ್ ಮುರ ರೇಂಜ್ ಅಧ್ಯಕ್ಷ ಸಿರಾಜುದ್ದೀನ್ ಸಖಾಫಿ ಪಿಚಲಾರ್ ಹಾಗೂ ಸ್ಥಳೀಯ ಮಸ್ಜಿದ್‌ಗಳಾದ ಇಂದಬೆಟ್ಟು , ಪಿಚಲಾರ್ , ಎರ್ಮಾಳ, ಬೆದ್ರಬೆಟ್ಟು, ಪೆರ್ದಾಡಿ ತಾಜುಲ್ ಉಲಮಾ ಮಸ್ಜಿದ್, ಅಜ್ಮೀರ್ ಜುಮ್ಮಾ ಮಸ್ಜಿದ್ ಪೆರ್ದಾಡಿಯ ಇಲ್ಲಿನ ಆಡಳಿತ ಸಮಿತಿ ಅದ್ಯಕ್ಷರುಗಳು , ಪದಾಧಿಕಾರಿಗಳು, ಸಮಿತಿ ಸದಸ್ಯರು, ಧರ್ಮ ಗುರುಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.

ಡಿ.ಕೆ ಅಬ್ದುರಶೀದ್ ಮದನಿ ಸ್ವಾಗತಿಸಿ ಧನ್ಯವಾದಗೈದರು.

Related posts

ಕಬಡ್ಡಿ ಪಟು ವಿದ್ಯಾರ್ಥಿ ಚಿನ್ಮಯ ಗೌಡ ಪಿ.ಕೆ ನಿಧನ

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯಲ್ಲಿ ಶ್ರೀ ಲಕ್ಷ್ಮಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಂದ ತೋಡಿನ ಹೂಳೆತ್ತುವ ಕಾರ್ಯ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ

Suddi Udaya

ಬೆಳ್ತಂಗಡಿ ಆಡಳಿತ ಸೌಧದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಸುನ್ನೀ ವಿದ್ಯಾಬ್ಯಾಸ ಬೋರ್ಡ್ ಫಲಿತಾಂಶ: ಕೊಯ್ಯೂರು ಉಣ್ಣಾಲು ಮದರಸದ ಮುಹಮ್ಮದ್ ರಾಝಿ, ಫಾತಿಮತ್ ನುಝೈರಾ ರೇಂಜ್ ಗೆ ಪ್ರಥಮ

Suddi Udaya
error: Content is protected !!