ಕೊಯ್ಯೂರು ಗ್ರಾಮದ ಹರ್ಪಳ ಎಂಬ ಕುಗ್ರಾಮ ಈಗಷ್ಟೇ ಎಳೆ ಮಗುವಿನಂತೆ ಅಭಿವೃದ್ಧಿಯತ್ತ ಮುಖ ಹಾಕಿದೆ. ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿಯನ್ನು ಕೇಳುವವರಿಲ್ಲ, ತಿರುಗಿ ನೋಡುವವರಿಲ್ಲ, ಕಾಡು ದಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಸುಮಾರು 10ದಿನಗಳ ಹಿಂದೆ ಮರ-ಬಳ್ಳಿ ದಿನನಿತ್ಯ ಸಾಗುವ ದಾರಿಗೆ ಅಡ್ಡಲಾಗಿ ಬಿದ್ದಿದೆ. ಅದಲ್ಲದೇ ರಸ್ತೆಯ ತೋಡಿಗೂ ಅಡ್ಡಲಾಗಿ ಇರುವುದರಿಂದ ಪ್ರವಾಹದ ಭೀತಿ ಎದುರಾಗಿದೆ.
ಸಂಬಂಧಪಟ್ಟವರಿಗೆ ಪರಿಸ್ಥಿತಿಯ ಚಿತ್ರಣ ಸಮೇತ ತಿಳಿಸಲಾಗಿದ್ದು, ಬರಿ ಸೂಚನಾ ಫಲಕಕ್ಕೆ ಸೀಮಿತವಾಗಿದೆ. ಈ ಭಾಗದಲ್ಲಿ ಸುಮಾರು 15 ಮನೆಗಳಿದ್ದು. ಶಾಲಾ ಮಕ್ಕಳಿಗೆ, ಕೆಲಸ ಕಾರ್ಯಗಳಿಗೆ ಹೋಗಲು ಭಾರಿ ಕಷ್ಟವಾಗಿದೆ. ಅಷ್ಟಕ್ಕೂ ಗ್ರಾಮಸ್ಥರೇ ತೆರವು ಮಾಡಲು ಅಸಾಧ್ಯವಾಗಿದ್ದು, ಅಡ್ಡಲಾಗಿರುವ ಮರವನ್ನು ಸರಿಸಿ ದಾರಿಯನ್ನು ಸರಿಮಾಡಿಸಿ ಕೊಡಿ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ