ಗೇರುಕಟ್ಟೆ: ಅಂಚೆ ಪತ್ರ ವಿತರಕ ಡಾಕಯ್ಯ ಗೌಡ ಸೇವಾ ನಿವೃತ್ತಿ, ಇಲಾಖೆ ಹಾಗೂ ಸ್ಥಳೀಯರ ವತಿಯಿಂದ ಸನ್ಮಾನ

Suddi Udaya

ಬೆಳ್ತಂಗಡಿ : ಗೇರುಕಟ್ಟೆ ಅಂಚೆ ಇಲಾಖೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರನ್ನು ಪುತ್ತೂರು ಉಪ ಅಂಚೆ ವಿಭಾಗದ ಹಾಗೂ ಗೇರುಕಟ್ಟೆ ಯುವಕರು ತಂಡದ ವತಿಯಿಂದ ಶ್ರೀಮತಿ ಮೋಹಿನಿ ಮತ್ತು ಡಾಕಯ್ಯ ಗೌಡ ದಂಪತಿ ಸಮೇತವಾಗಿ ಗೇರುಕಟ್ಟೆ ಸಹಕಾರಿ ಭವನದಲ್ಲಿ ಜು.6 ರಂದು ನಡೆಯಿತು.


ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿದ್ದರು.
ಅಂಚೆ ಇಲಾಖೆ ಪುತ್ತೂರು ವಿಭಾಗದ ಉಪ ಅಧಿಕ್ಷಕರಾದ ಮೋಹನ್,ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ.ಕಳಿಯ ಸಿ.ಎ.ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕವಿತಾ ಶೆಟ್ಟಿ, ಅಂಚೆ ಇಲಾಖೆ ನಿವೃತ್ತ ಕೂಸಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.


ಗೇರುಕಟ್ಟೆ ವಿವಿಧ ಸಂಘದ ವತಿಯಿಂದ ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.ಸ್ಥಳೀಯ ಯುವಕರ ತಂಡ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಗುರುವಾಯನಕೆರೆ ಅಂಚೆ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗೇರುಕಟ್ಟೆ ಅಂಚೆ ಇಲಾಖೆ ಸಿಬ್ಬಂದಿ ಕು. ಸವೀತಾ ಸ್ವಾಗತಿಸಿ, ಓಡಿಲ್ನಾಳ ಅಂಚೆ ಇಲಾಖೆ ಸಿಬ್ಬಂದಿ ಶ್ರೀಮತಿ ಸುಪ್ರೀಯಾ ವಂದಿಸಿದರು. ಮಂಗಳೂರು ಅಂಚೆ ಕಚೇರಿ ನಿವೃತ್ತ ವಿಠ್ಠಲ ಶೆಟ್ಟಿ ಉಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ಕಳಿಯ ಮತ್ತು ನ್ಯಾಯತರ್ಪು ಗ್ರಾಮಸ್ಥರು ಭಾಗವಹಿಸಿದ್ದರು.

Leave a Comment

error: Content is protected !!