ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಜು.6 ರಂದು ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನ ಬೆಳ್ತಂಗಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಸ್ರೋ ಬೆಂಗಳೂರಿನ ಹಿರಿಯ ವಿಜ್ಞಾನಿ ಪಿ. ವಾಸುದೇವ ರಾವ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಸುಧಾ ವಾರಪತ್ರಿಕೆ ಹಾಗೂ ಪ್ರಜಾವಾಣಿ ದಿನ ಪತ್ರಿಕೆ ಬೆಂಗಳೂರಿನ ಮುಖ್ಯ ಉಪ ಸಂಪಾದಕರರಾದ ಶ್ರೀಮತಿ ಉಮಾ ಅನಂತ್ ವಿಶೇಷ ಉಪನ್ಯಾಸ ನೀಡಿದರು.
ಮುಖ್ಯ ಅಭ್ಯಾಗತರಾಗಿ ದ.ಕ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ವಹಿಸಿದ್ದರು.
ಕಾರ್ಯಕ್ರಮದಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಪೈಕಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಕಲ್ಮಂಜ ಸರ್ಕಾರಿ ಪ್ರೌಢ ಶಾಲೆಯ ತನುಶ್ರೀ, ಕಾಯರ್ತಡ್ಕ ಸರ್ಕಾರಿ ಪ್ರೌಢ ಶಾಲೆಯ ಮೇಘನಾ ಹಾಗೂ ಮಚ್ಚಿನ ಸರ್ಕಾರಿ ಪ್ರೌಢ ಶಾಲೆಯ ಮಹಮ್ಮದ್ ಜಿಯಾದ್ ಇವರನ್ನು ಗೌರವಿಸಲಾಯಿತು. ಪತ್ರಕರ್ತ ಮನೋಹರ್ ಬಳಂಜ ಹಾಗೂ ಲಿಖಿತ ದಂಪತಿ ಇವರ ವತಿಯಿಂದ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗಾಗಿ ಅರ್ಹ 6 ಮಂದಿಗೆ ದಿತಿ ಸಾಂತ್ವನ ನಿಧಿಯನ್ನು ಹಸ್ತಾಂತರಿಸಲಾಯಿತು.
ಶಾಲಾ ಮಕ್ಕಳ ಪ್ರಾರ್ಥನೆ ಬಳಿಕ ಸಂಘದ ಕಾರ್ಯದರ್ಶಿ ಗಣೇಶ್ ಶಿರ್ಲಾಲು ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ, ಸದಸ್ಯರಾದ ದೇವಿಪ್ರಸಾದ್, ಆರ್.ಎನ್ ಪೂವಣಿ, ಬಿ.ಎಸ್.ಕುಲಾಲ್, ಅರವಿಂದ ಹೆಬ್ಬಾರ್, ಜಾರಪ್ಪ ಪೂಜಾರಿ, ಮಂಜುನಾಥ ರೈ ಅತಿಥಿ-ಗಣ್ಯರನ್ನು ಗೌರವಿಸಿದರು. ದಿತಿ ಸಾಂತ್ವಾನ ನಿಧಿಬಗ್ಗೆ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಮಾಹಿತಿ ನೀಡಿದರು. ದೀಪಕ್ ಅಠವಳೆ ಸಂದೇಶ ವಾಚಿಸಿದರು.
ಜೊತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿ, ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ ವಂದಿಸಿದರು.