ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ಆವರಣದಲ್ಲಿ ವನ ಮಹೋತ್ಸವ

Suddi Udaya

ಸುಬ್ರಹ್ಮಣ್ಯ: ನಿಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಅಧೀನದಲ್ಲಿರುವ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ಆವರಣದ ಪರಿಸರದಲ್ಲಿ ಜು.5 ರಂದು ಅರಣ್ಯ ಇಲಾಖೆ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ,ಸುಬ್ರಮಣ್ಯ ರೋಟರಿ ಕ್ಲಬ್ ,ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇವುಗಳ ಜಂಟಿ ಆಶಯದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾತನಾಡುತ್ತಾ ನಮಗೆ ಪ್ರಕೃತಿ ಪರಿಸರ ಎಷ್ಟು ಮುಖ್ಯ ಎಂಬುದನ್ನು ನಾವು ಅರಿತುಕೊಂಡಿದ್ದೇವೆ . ಇಡೀ ಪ್ರಪಂಚದ ಸಮತೋಲನವನ್ನು ಕಾಪಾಡಲು ಪ್ರಕೃತಿಯೇ ಮುಖ್ಯ. ಆದ್ದರಿಂದ ನಾವೆಲ್ಲರೂ ಇದರ ಬಗ್ಗೆ ಕಾಳಜಿ ವಹಿಸಿ ದಟ್ಟವಾದ ಅರಣ್ಯವನ್ನ ಬೆಳೆಸಿ ಅದನ್ನ ಪೂಷಿಸಬೇಕು .ಇವತ್ತು ವಾಣಿಜ್ಯ ಬೆಳೆಗಳನ್ನ ನಾವು ಎಷ್ಟು ಮಾಡುತ್ತೇವೋ ಆದರೆ ಪರಿಸರಕ್ಕೆ ಪೂರಕವಾದ ಅರಣ್ಯವನ್ನು ನಾವು ನೆಟ್ಟು ಬೆಳೆಸಬೇಕಾಗಿದೆ. ಗಿಡಮರಗಳನ್ನು ನೆಟ್ಟು ಬೆಳೆಸಬೇಕಾಗಿದೆ .ಇಲ್ಲಿ ನಾವು ಬೆಳೆಸಿದ ಗಿಡಗಳು ಅದು ಬೇರೆ ಕಡೆಗೆ ಉಪಯೋಗ ಆಗುತ್ತದೆ. ನಮ್ಮ ಹಿರಿಯರು ಪುಣ್ಯಕಾರ್ಯವನ್ನು ಮಾಡಿದ ಕಾರಣ ನಾವು ಇಂದು ಶುದ್ಧವಾದ ಗಾಳಿ, ಆಹಾರ, ನೀರನ್ನು ಸೇವಿಸಿ ಬದುಕುತ್ತಿದೇವೆ .ಅದೇ ರೀತಿ ನಾವು ಕೂಡ ಪ್ರಕೃತಿಯನ್ನು ಪೋಷಿಸಿದರೊಂದಿಗೆ ನಮ್ಮ ಬದುಕಿಗೆ ಕಾರಣಕರ್ತರಾಗಬೇಕು ಎಂದು ಅವರು ನುಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿಟ್ಟೆ ಡಿಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷರಾದ ಡಾ. ಸತೀಶ್ ಭಂಡಾರಿ ಅವರು ಇಲ್ಲಿಯ ಸದಾನಂದ ಆಸ್ಪತ್ರೆ ಸುಬ್ರಹ್ಮಣ್ಯದ ಪರಿಸರದ ಜನರಿಗೆ ಆರೋಗ್ಯದ ಬಗ್ಗೆ ಸಲಹೆ ಸೂಚನೆಗಳನ್ನು ಕೊಡುತ್ತಾ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಜನರ ಆರೋಗ್ಯಕ್ಕೆ ವೈದ್ಯರು ಎಷ್ಟು ಮುಖ್ಯವೋ ಹಾಗೆಯೇ ಪರಿಸರದ ಆರೋಗ್ಯಕ್ಕೆ ಗಿಡಗಳು ಅಷ್ಟೇ ಮುಖ್ಯ ಎಂದರು.

ವೇದಿಕೆಯಲ್ಲಿ ನಿಟ್ಟೆ ಸಮುದಾಯ ಆಸ್ಪತ್ರೆ ವಿಭಾಗದ ಮುಖ್ಯಸ್ಥರಾದ ಡಾl ರಾಘವೇಂದ್ರ, ಸಮುದಾಯ ಆಸ್ಪತ್ರೆಯ ಡೆಂಟಲ್ ಸರ್ಜನ್ ಡಾl ಆಂಟ್ರಿ ಡಿ ‘ರೋಜಾ ಹಾಗೆ ನಿಟ್ಟೆ ಸಮುದಾಯ ಆಸ್ಪತ್ರೆಯ ಎನ್ಎಸ್ಎಸ್ ಸಂಯೋಜಕರುಗಳಾದ ಶಶಿಕುಮಾರ್ ಶೆಟ್ಟಿ, ಸುನಿಲ್, ಸುಬ್ರಹ್ಮಣ್ಯ ಆಸ್ಪತ್ರೆಯ ಸದಾನಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿಕ್ರಂ, ಡೆಂಟಲ್ ಸರ್ಜನ್ ಡಾ. ಚರಣ್ ಶೆಟ್ಟಿ, ರೋಟರಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಸೀನಿಯರ್ ಚೇಂಬರ್ ಅಧ್ಯಕ್ಷ ಡಾl ರವಿ ಕಕ್ಕೆ ಪದವು ಉಪವಲಯ ಅರಣ್ಯಾಧಿಕಾರಿ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ ,ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಸದಸ್ಯರುಗಳು, ಸದಾನಂದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ಹಾಜರಿದ್ದರು. ಲಯನ್ಸ್ ಕ್ಲಬ್ ನಿರ್ದೇಶಕಿ ವಿಮಲ ರಂಗಯ್ಯ ಸ್ವಾಗತಿಸಿದರು. ಸುಬ್ರಮಣ್ಯ ರೋಟರಿ ಕ್ಲಬ್ ನ ವಲಯ ಸೇನಾಧಿಕಾರಿ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದಲ್ಲಿ ಜೆ ಸಿ ಐ ಪೂರ್ವ ಅಧ್ಯಕ್ಷ ಮೋಹನ ಪಳ್ಳಿ ಗದ್ದೆ ಧನ್ಯವಾದ ಸಮರ್ಪಿಸಿದರು. ನಂತರ ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ಪರಿಸರದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿವಿಧ ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

Leave a Comment

error: Content is protected !!