38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆಯನ್ನು ಜು.5 ರಂದು ಶಾಲಾ ಸಭಾಭವನದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಲಾಯಿತು.

ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಸ್ವಾ| ಜೆರೋಮ್ ಡಿಸೋಜ, ಶಾಲಾ ಮುಖೋಪಾಧ್ಯಾಯವರಾದ ವಂ|ಸ್ವಾ| ದೀಪಕ್ ಲಿಯೋ ಡೇಸ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಡಿಸೋಜ ಹಾಗೂ ವಿದ್ಯಾರ್ಥಿಗಳು ಗಿಡವನ್ನು ನೆಟ್ಟು ಅದಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ಆರನ್ ಸ್ಮಿತ್ ವನಮಹೋತ್ಸವದ ಮಹತ್ವದ ಬಗ್ಗೆ ವಿವರಣೆ ನೀಡಿದರು.

ವಿದ್ಯಾರ್ಥಿಗಳು ಹಾಡು, ನೃತ್ಯದ ಮೂಲಕ ವನಮಹೋತ್ಸವದ ಮಹತ್ವವನ್ನು ಪ್ರದರ್ಶಿಸಿದರು. ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾವು ದೇವರ ಜೊತೆ, ಜನರ ಜೊತೆ, ಮತ್ತು ಪ್ರಕೃತಿಯ ಜೊತೆಗೆ ಬಾಂಧವ್ಯವನ್ನು ಇಟ್ಟುಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಂ|ಸ್ವಾ| ಜೆರೋಮ್ ಡಿಸೋಜರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಬೀಜ ಬಿತ್ತಿ ಗಿಡ ಮರಗಳನ್ನು ಬೆಳೆಸಬೇಕೆಂದು ಹೇಳಿದರು. ಶಾಲಾ ಮುಖೋಪಾಧ್ಯಾಯವರಾದ ವಂ|ಸ್ವಾ| ದೀಪಕ್ ಲಿಯೋ ಡೇಸ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ನಾವು ಗಿಡ ಮರಗಳನ್ನು ಬೆಳೆಸಿ, ಪ್ರಕೃತಿಯನ್ನು ಉಳಿಸಬೇಕೆಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಂಚಲಾಯಿತು. ವಿದ್ಯಾರ್ಥಿಗಳಾದ ಅನೆಟ್ ಅನ್ನ ಚಾರ್ಲಿ ಮತ್ತು ಎಲ್ರಿಕಾ ನಿಕೋಲ್ ಸೇರಾವೋರವರು ಕಾರ್ಯಕ್ರಮವನ್ನು ನಿರೂಪಿಸಿ, ಅದ್ವಿತ ಶೆಟ್ಟಿರವರು ಸ್ವಾಗತಿಸಿ, ಯಶ್ವಿಜ್ ಶೆಟ್ಟಿರವರು ಧನ್ಯವಾದವನ್ನು ಸಮರ್ಪಿಸಿದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ- ಶಿಕ್ಷಕೇತರ ವೃಂದದವರು ಸಹಕರಿಸಿದರು.

Related posts

ವಕ್ಫ್‌ ಕಾಯ್ದೆಯನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ವರ್ಣದ ವಿಚಾರವಾಗಿ ನಿಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಬೇಕೆಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಗ್ರಹ

Suddi Udaya

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆದೂರು ಪೇರಲ್ ನ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ದೇವರಿಗೆ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ಆರಂಬೋಡಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: 500ಕ್ಕಿಂತ ಹೆಚ್ಚು ಜನರು ವಿವಿಧ ರೀತಿಯ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪ್ರಭಾಕರ, ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಆಯ್ಕೆ

Suddi Udaya

ಬಳಂಜ ಸ.ಹಿ.ಪ್ರಾ. ಶಾಲೆಯ ಅಭಿವೃದ್ಧಿಗೆ ರೂ. 2.00 ಕೋಟಿ ಅನುದಾನ ಮಂಜೂರುಗೊಳಿಸುವಂತೆ ಶಾಸಕ ಹರೀಶ್ ಪೂಂಜರಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮನವಿ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ

Suddi Udaya
error: Content is protected !!