30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಮಸ್ಯೆ

ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

ಬೆಳ್ತಂಗಡಿ: ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬವಿದ್ದು ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ವಾಹನಗಳು ಸಂಚರಿಸುತ್ತಿದ್ದು, ಇದೇ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆಯ ತಡೆಗೋಡೆ ಅಪಾಯಕರ ಮಟ್ಟದಲ್ಲಿ ರಸ್ತೆ ಕಡೆಗೆ ವಾಲಿಕೊಂಡಿದೆ.

ತಡೆಗೋಡೆಯ ಒಳಭಾಗದಲ್ಲಿ ಇದಕ್ಕೆ ತಾಗಿಕೊಂಡೇ ಹಲವಾರು ಮರಗಳು ಕೂಡಾ ಇದ್ದು ಜೋರು ಗಾಳಿ ಬೀಸಿದರೆ ತಡೆಗೋಡೆ ಬೀಳುವ ಮಟ್ಟದಲ್ಲಿದೆ. ಇದರ ಎದುರು ಭಾಗದಲ್ಲಿ ವಿದ್ಯುತ್ ಕಂಬ ಕೂಡಾ ಮರಗಳಿಂದ ಆವೃತವಾಗಿ ಭಾರಿ ಅಪಾಯಕರ ಸ್ಥಿತಿಯಲ್ಲಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಇದನ್ನು ತೆರವುಗೊಳಿಸಬೇಕೆಂದು ಇಲ್ಲಿನ ನಿವಾಸಿಗಳ ಒತ್ತಾಯಿಸಿದ್ದಾರೆ.

Related posts

ಕೊಯ್ಯೂರು : ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರ ಎಳೆದು ಪರಾರಿ

Suddi Udaya

ಸುರ್ಯ ದೇವಸ್ಥಾನದ ಆನುವಂಶಿಕ ಆಡಳಿತಮೊಕ್ತೇಸರಾಗಿ ಡಾ. ಸತೀಶ್ಚಂದ್ರ ಸುರ್ಯಗುತ್ತು ನೇಮಕ

Suddi Udaya

ಲಾಯಿಲ ಕನ್ನಾಜೆ ನಿವಾಸಿ ಸೇಸಪ್ಪ ಸಪಲ್ಯ ನಿಧನ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅನ್ವಿತ್ ತೃತೀಯ ಸ್ಥಾನ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya
error: Content is protected !!