24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ನಡ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ನಡ: “ನಮ್ಮ ತಪ್ಪುಗಳಿಗೆ, ನಮ್ಮ ಸೋಲುಗಳಿಗೆ ನಾವೇ ಕಾರಣರಾಗುತ್ತೇವೆ. ಸಾಧನೆಗೆ ಬಡತನ ಎಂದೂ ಅಡ್ಡಿಯಾಗಲಾರದು. ಸ್ವಪ್ರಯತ್ನವನ್ನು ಬಿಡಬಾರದು. ಅದೃಷ್ಟವನ್ನೇ ನಂಬಿ ಕೂರಬಾರದು. ಒಳ್ಳೆಯ ಆಲೋಚನೆಯಿಂದ ಕಾರ್ಯ ಮಾಡಿದಾಗ ಒಳ್ಳೆಯ ಪ್ರತಿಫಲವೇ ಸಿಗುತ್ತದೆ” ಎಂದು ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಗಣೇಶ್ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಡ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ನಡ ಗ್ರಾಮ ಪಂಚಾಯತ್ ನ ಪ್ರಥಮ ಪ್ರಜೆ ಶ್ರೀಮತಿ ಮಂಜುಳಾ ದೇವಾಡಿಗ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜಿತ್ ಕುಮಾರ್ ಆರಿಗ, ಕೊಯ್ಯೂರು ಸ. ಪ. ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮೋಹನ ಗೌಡ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಪರಿಸರಗೀತೆಯನ್ನು ಹಾಡಿದರು. ಪರಿಸರ ಸ್ಫರ್ಧೆಯ ಬಹುಮಾನವನ್ನು ರೇಂಜರ್ಸ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕನ್ನಡ ಉಪನ್ಯಾಸಕರಾದ ಶ್ರೀಮತಿ ಲಿಲ್ಲಿ ಪಿ.ವಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ಚುನಾವಣಾ ಸಂಚಾಲಕರಾದ ರಾಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪಾ ಡಿ. ಪ್ರಸ್ತಾವನೆಗೈದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ವಸಂತಿ ಪಿ. ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಸುಕೇತ ವಂದಿಸಿದರು.

Related posts

ಕಣಿಯೂರು ಅಶೋಕ್ ಕುಲಾಲ್ ರಿಂದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

Suddi Udaya

ಉಜಿರೆ: ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ನಿಡ್ಲೆ ಗ್ರಾಮದ ಕಾಂಗ್ರೆಸ್ ಬೆಂಬಲಿಗರು ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

Suddi Udaya

ಬಂದಾರು ಗ್ರಾ.ಪಂ.ನಲ್ಲಿ ವಿವಿಧ ಕೃಷಿಯ ಮಾಹಿತಿ ಕಾರ್ಯಕ್ರಮ

Suddi Udaya

ತುಮಕೂರಿನಲ್ಲಿ ‘ಜಿ.ಎನ್.ಆರ್ ಕಲ್ಪತರು ಸಿರಿ ಮಾರ್ಟ್’ ಸಿರಿ ಉತ್ಪನ್ನಗಳ ನೂತನ ಮಾರಾಟ ಮಳಿಗೆ ಶುಭಾರಂಭ

Suddi Udaya

ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ ಒಕ್ಕೂಟದ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!