ಕೊಕ್ಕಡ: ಅಮೃತ ಗ್ರಾ.ಪಂ ಕೊಕ್ಕಡ ಇದರ ಸ್ವಂತ ನಿಧಿಯ ಶೇ. 25 ಅನುದಾನದಡಿ ಪ.ಜಾತಿ\ಪ.ಪಂಗಡದವರಿಗೆ ನೀರಿನ ಡ್ರಮ್ ವಿತರಣಾ ಕಾರ್ಯಕ್ರಮ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಜು.9ರಂದು ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ 105 ನೀರಿನ ಡ್ರಮ್‌ಗಳನ್ನು ಅರ್ಹ ಪ.ಜಾತಿ\ಪ.ಪಂಗಡದ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾರವರು ಕೊಕ್ಕಡ ಗ್ರಾ.ಪಂ ತನ್ನ ಸ್ವಂತ ನಿಧಿಯಿಂದ ಪ.ಜಾತಿ\ಪ.ಪಂಗಡದ ಅರ್ಹ ಫಲಾನುಭವಿಗಳಿಗೆ ನೀಡಿರುವುದು ಶ್ಲಾಘನೀಯ ಕೆಲಸವಾಗಿದೆ. ರಾಜ್ಯ ಸರಕಾರ ಪ.ಜಾತಿ\ಪ.ಪಂಗಡದ ಅನುದಾನ ತಡೆ ಹಿಡಿದಿರುವುದರಿಂದ ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದರು.
ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಬೇಬಿ ವಹಿಸಿದ್ದರು. ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಗಿರೀಶ್ ಮಹಾವೀರ ಕೊಲೋನಿ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿಠಲ ಕುರ್ಲೆ, ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ, ಮಾಜಿ ಉಪಾಧ್ಯಕ್ಷ ಪವಿತ್ರಾ ಗುರುಪ್ರಸಾದ್, ಗ್ರಾ.ಪಂ ಸದಸ್ಯರು, ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್‌ರಾಜ್ ಧನ್ಯವಾದವಿತ್ತರು.