April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮ

ಗುರುವಾಯನಕೆರೆ: ಮಕ್ಕಳಿಗೆ ಸ್ಫೂರ್ತಿ ತುಂಬಿ ಓದಿನಡೆಗೆ ಹುರುದುಂಬಿಸಿ, ಪಿಯುಸಿಯಲ್ಲಿಯೇ ಮಹತ್ತರವಾದುದ್ದನ್ನ ಸಾಧಿಸಿ, ಭವಿಷ್ಯ ರೂಪಿಸಿಕೊಳ್ಳುವ ದೃಷ್ಠಿಯಿಂದ ವಿದ್ವತ್ ಪಿಯು ಕಾಲೇಜಿನಲ್ಲಿ ಮಹತ್ವದ ಓರಿಯಂಟೇಷನ್ ಕಾರ್ಯಕ್ರಮ ಜು.8 ರಂದು ನಡೆಯಿತು.

ವಿದ್ವತ್ ಸ್ಫೂರ್ತಿ ಸಂಚಿಕೆಯ ( Motivational Edition) ಮೊದಲನೇ ಭಾಗವಾದ ಈ ಕಾರ್ಯಕ್ರಮವನ್ನ ವಿದ್ವತ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗೆ ಓದುವ ವಿಧಾನ ಹಾಗೂ ನೆನಪಿನ ಶಕ್ತಿ ವೃದ್ಧಿಯ ಬಗ್ಗೆ ಕೆಲವು ವೈಜ್ಞಾನಿಕ ಸಲಹೆಗಳನ್ನೊಳಗೊಂಡಿದ್ದಲ್ಲದೇ, ಪಿಯು ಹಂತದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ವಿಸ್ತೃತ ಮಾಹಿತಿ, ಮಕ್ಕಳು ಸಾಧನೆ ಮಾಡುವ ಇಚ್ಛೆ ಇರುವವರು ಸಮಯವನ್ನ ಹೇಗೆ ಉಪಯೋಗಿಸಿಕೊಳ್ಳಬೇಕು, ಪ್ರತಿದಿನದ ದಿನಚರಿ ಹೇಗಿರಬೇಕು, ಬೇಸಿಕ್ಸ್ ಗಳನ್ನ ಹೇಗೆ ವರ್ಕ್ ಮಾಡಿಕೊಳ್ಳಬೇಕು, ಮನೆಯ ಕಷ್ಟದ ಪರಿಸ್ಥಿತಿಯನ್ನ ಹೇಗೆ ತೆಗೆದುಕೊಳ್ಳಬೇಕು, ಕೊರತೆಯನ್ನೇ ಹೇಗೆ ಮೆಟ್ಟಿನಿಲ್ಲಬೇಕು, ಪೋಷಕರ ಆಸೆಗಳೇನಾಗಿರುತ್ತವೆ ಹಾಗೂ ಅವುಗಳನ್ನ ಹೇಗೆ ಗಂಭೀರವಾಗಿ ಪರಿಗಣಿಸಬೇಕು ಎಂಬಿತ್ಯಾದಿ ಸೂಕ್ಷ್ಮಗಳನ್ನ ಮನಮುಟ್ಟುವಂತೆ ಎಲ್ಲಾ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಿದ್ವತ್ ಪಿಯು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ಪ್ರತಾಪ್ ದೊಡ್ಡಮನಿಯವರು ವಿದ್ವತ್ ಕಾಲೇಜಿನ ಪರೀಕ್ಷಾ ಮಾದರಿ, ಕೌನ್ಸಲಿಂಗ್ ಮಾದರಿ ಹಾಗೂ ಸಾಧಕ ಮಾದರಿಯ ಸಮಗ್ರ ಮಾಹಿತಿ ನೀಡಿದರು.

ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಸುಭಾಶ್ವಂದ್ರ ಶೆಟ್ಟಿಯವರು ವಿದ್ವತ್ ಪ್ರತಿಷ್ಠಾನದ ಭವಿಷ್ಯದ ಕನಸನ್ನು ವ್ಯಕ್ತ ಪಡಿಸಿ, ಮಹತ್ವದ ಪಿಯು ಶಿಕ್ಷಣಕ್ಕೆ ವಿದ್ವತ್ ಕರ್ನಾಟಕದ ಮಹತ್ವಾಕಾಂಕ್ಷಿ ಮಕ್ಕಳಿಗೆ ಹೇಗೆ ವೇದಿಕೆಯಾಗಲಿದೆ ಎಂಬುದನ್ನ ತಿಳಿಸಿದರು.

ಪ್ರಾಂಶುಪಾಲರಾದ ಜಯೇಂದ್ರ ಬಂದ್ಯಾ ನ್ ವಿದ್ವತ್ ಡಿಜಿಟಲ್ ಪ್ಲಾಟ್ ಫಾರಂ “ವಿದ್ವತ್ ಯುಟಿಲಿಟಿ ಆ್ಯಪ್” ನ್ನ ಪರಿಚಯಿಸಿದರು..

ವಿದ್ವತ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಪ್ರಜ್ವಲ್ ರೈ ಹಾಗೂ ಖಜಾಂಚಿ ಎಮ್. ಕೆ ಕಾಶೀನಾಥ್ ರವರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಲ್ಲೇರಿಯಲ್ಲಿ ಸಂಘದ ಎರಡನೇ ಶಾಖೆ ಲೋಕಾರ್ಪಣೆ

Suddi Udaya

ಎಲೆಚುಕ್ಕಿ ರೋಗದಿಂದ ರೈತರು ಹೈರಾಣಾಗಿದ್ದಾರೆ-ವಿಧಾನ ಪರಿಷತ್ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಬೊಟ್ಯಾಡಿ

Suddi Udaya

ಮಚ್ಚಿನ: ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ, ವೀರಕೇಸರಿ ಹಿಂದೂಪುರ ಸಂಘಟನೆಯಿಂದ ಬಳಂಜ ಪೇಟೆಯಲ್ಲಿ ಶ್ರೀರಾಮದೇವರ ಶೃಂಗಾರ ಮಂಟಪ

Suddi Udaya

ಗುರುವಾಯನಕೆರೆ-ಉಜಿರೆ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಶೇ.40 ರಷ್ಟು ಡಿಸ್ಕೌಂಟ್ ಸೇಲ್

Suddi Udaya

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ

Suddi Udaya
error: Content is protected !!