24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ : ಶ್ರೀ.ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ‘ವಿದ್ಯಾರ್ಥಿ ಸಂಸತ್ತು ಪದಗ್ರಹಣ’

ಉಜಿರೆ : ಜಗತ್ತು ಎಷ್ಟು ಸುಂದರವೊ ಅಷ್ಟೇ ಕೆಟ್ಟದಾಗಿದೆ, ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸುವ ಎಲ್ಲಾ ವ್ಯವಸ್ಥೆಗಳು ಸುತ್ತ ಮುತ್ತ ಇದ್ದು ನಾವು ಜಾಗೃತ ಮನಸ್ಥಿತಿ ಬೆಳೆಸಿಕೊಂಡರೆ ನಮ್ಮ ಭವಿಷ್ಯ, ಕಲಿಕೆ, ಸಾಧನೆ ಮುನ್ನಡೆಸಬಹುದು. ಪಿಯುಸಿ ಹಂತದಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡರೆ ಮುಂದಿನ ಕಾಲಘಟ್ಟ ಸುಗಮಗೊಳಿಸಬಹುದು.


ಶಿಕ್ಷಣ ಕ್ಷೇತ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸ್ಪರ್ಧೆಗಳಿಗೆ ನಾವು ಹೊಂದಿಕೊಳ್ಳಲು ನಿತ್ಯ ಅಭ್ಯಾಸ ನಿರತತೆ ಬೇಕೇ ಬೇಕು.
ಸಂಸ್ಥೆ ಹಳೆ ವಿದ್ಯಾರ್ಥಿಯಾಗಿ ನಮ್ಮನ್ನು ಬೆಳೆಸಿದ ರೀತಿಗೆ ನಾವು ಈ ಮಟ್ಟಕ್ಕೇರಲು ಸಾಧ್ಯವಾಗಿದೆ, ಕಲಿಕೆ ಜೊತೆಗೆ ಮೌಲ್ಯ ಶಿಕ್ಷಣ, ನೈತಿಕತೆ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಎಲ್ಲವೂ ಇಲ್ಲಿ ನಿರಂತರವಾಗಿ ಸಿಕ್ಕಿದ ಕಾರಣ ಭವಿಷ್ಯ ಕಟ್ಟಲು ಅನುಕೂಲಕರವೆಂದು ಸಂಸ್ಥೆ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರು ಕೆ.ಎಂ. ಸಿ ಯಲ್ಲಿ ಕಾರ್ಡಿಯಾಲಾಜಿಸ್ಟ್ ಆಗಿರುವ ಡಾ. ವಿಕ್ರಂ ಶಾನುಭಾಗ್ ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನೊರ್ವ ಅತಿಥಿಯಾಗಿ ಆಗಮಿಸಿದ್ದ ಎಸ್.ಡಿ. ಎಂ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾಗಿರುವ ಧನ್ಯಕುಮಾರ್ ಅವರು ನಾಯಕನ ಗುಣಲಕ್ಷಣಗಳು ಹೇಗಿರಬೇಕು, ನಾಯಕತ್ವ ಅಧಿಕಾರವಲ್ಲ, ಅದೊಂದು ಜವಾಬ್ದಾರಿ, ದೂರದರ್ಶಿ ಗುಣಗಳೊಂದಿಗೆ ಆಂತರಿಕ ಶಕ್ತಿ ಜಾಗ್ರತಗೊಳಿಸಿ ಕಾರ್ಯಾಸನ್ನದ್ದರಾಗಿ, ಮಕ್ಕಳು ಸಿಕ್ಕಿದನ್ನು ಹೆಕ್ಕಿ ತಿನ್ನುವ ಹಕ್ಕಿಗಳಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಪ್ರಮಾಣ ವಚನ ಬೋಧಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಅಬ್ಜಿತ್ ದಿನೇಶ್ ಕಾರ್ಯದರ್ಶಿಯಾಗಿ ಶ್ರೇಯಸ್ ಗೌಡ ಟಿ.ಏನ್ ಆಯ್ಕೆಯಾದರು.

ಕಾಲೇಜಿನ ಉಪಪ್ರಾಂಶುಪಾಲರಾದ ಮನೀಶ್ ಕುಮಾರ್, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಮಾರ್ಗದರ್ಶಕರಾದ ಲಕ್ಷ್ಮಣ್ ಜಿ. ಡಿ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Related posts

ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಕಂಬಳ ಅಭಿಮಾನಿಗಳ ಹೋರಾಟಕ್ಕೆ ಸಂದ ಜಯ :ರಕ್ಷಿತ್ ಶಿವರಾಂ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ನಿಡ್ಲೆ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಟೋಚಾಲಕ

Suddi Udaya

ಪಿಲಿಚಂಡಿಕಲ್ಲು ನಿವಾಸಿ ಶೇಕ್ ಇಮಾಮ್ ಸಾಹೇಬ್ ಮನೆಗೆ ಬಡಿದ ಸಿಡಿಲು: ಸುಟ್ಟು ಹೋದ ಮನೆಯ ವಿದ್ಯುತ್ ಸಂಪರ್ಕ, ಮನೆಯ ಗೋಡೆಗಳಿಗೆ ಹಾನಿ

Suddi Udaya

ಬೆಳ್ತಂಗಡಿ: ವಿದ್ಯಾರ್ಥಿಯ ದತ್ತು ಸ್ವೀಕಾರ, ದೀಪಕ್ ಹೆಚ್.ಡಿ ಯವರಿಗೆ ಸನ್ಮಾನ

Suddi Udaya

ಕುಂಟಾಲಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya
error: Content is protected !!