ಬೆಳ್ತಂಗಡಿ :ಕಳಿಯ ಪಂಚಾಯತ್ ವ್ಯಾಪ್ತಿಯಲ್ಲಿರುವ ಗೋವಿಂದೂರು ಮತ್ತು ಯಂತ್ರಡ್ಕ ಸಮೀಪದ ರಸ್ತೆಯಲ್ಲಿ ಬೃಹತ್ತಾದ ಗುಂಡಿಗಳು ಸೃಷ್ಟಿಯಾಗಿದೆ. ಮಳೆ ಬರುವ ಸಂದರ್ಭದಲ್ಲಿ ನೀರು ನಿಂತಿರುವ ಗುಂಡಿ ಗಮನಕ್ಕೆ ಬಾರದೆ ಸುಮಾರು 10 ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಜೊತೆಯಲ್ಲಿದ್ದ ಮಹಿಳೆಯರು, ಮಕ್ಕಳು ರಸ್ತೆಗೆ ಅಪ್ಪಳಿಸಿ ಕೈ-ಕಾಲು – ತಲೆಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಅವರಿಗೆ ಸಹಾಯ ಮಾಡಿದ ಬಗ್ಗೆ ರಸ್ತೆ ಪಕ್ಕದ ಮನೆಯವರು ಬೇಸರ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗೆ ಬಿದ್ದು ದೊಡ್ಡ ಅನಾಹುತ ಆಗುವುದನ್ನೇ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಕಾಯುತ್ತಾರೆ ಸಂಬಂಧಿಸಿದ ಇಲಾಖೆಯವರು ಎಂದು ಬೇಸರದಿಂದ ನೀಡಿದರು.
ವಿವಿಧ ಇಲಾಖೆಯ ನೂರಾರು ಸರಕಾರಿ ನೌಕರರು, ಉನ್ನತ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದೇ ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ಕೊಂಡು ಪ್ರಯಾಣ ಮಾಡುತ್ತಾರೆ. ಅದರೂ ಕಿಂಚಿತ್ತೂ ಗಮನಹರಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಥಳೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ವರದಿ : ಕೆ.ಎನ್ ಗೌಡ