24.4 C
ಪುತ್ತೂರು, ಬೆಳ್ತಂಗಡಿ
April 4, 2025
ಜಿಲ್ಲಾ ಸುದ್ದಿಪ್ರಮುಖ ಸುದ್ದಿ

ಕಲ್ಲಿನ ಕೋರೆಗೂ ನನಗೂ ಸಂಬಂಧವಿಲ್ಲ ಬೆಳ್ತಂಗಡಿ ಮಾರಿ ಗುಡಿಯಲ್ಲಿ ಶಶಿರಾಜ್ ಶೆಟ್ಟಿ ಪ್ರಮಾಣ

ಬೆಳ್ತಂಗಡಿ: ಮೇಲಂತಬೆಟ್ಟು ಬಳಿ ಕಲ್ಲಿನಕೋರೆ ದಾಳಿ ವೇಳೆ ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಸೇರಿಸಿ ಕೇಸ್ ದಾಖಲಿಸಿ ಜೈಲಿಗಟ್ಟಿದವರಿಗೆ ಬೆಳ್ತಂಗಡಿ ಮಾರಿಗುಡಿಯ ತಾಯಿ ಮಹಮ್ಮಾಯಿ ಶಿಕ್ಷೆ ನೀ ಡಲಿ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರು ಜುಲೈ 12 ರಂದು ಬೆಳ್ತಂಗಡಿ ಮಹಮ್ಮಾಯಿ ದೇವಸ್ಶಾನದಲ್ಲಿ ಪ್ರಾರ್ಥಿಸಿದರು.
ಕಳೆದ 2 ತಿಂಗಳ ಹಿಂದೆ ಮೇಲಂತಬೆಟ್ಟು ಸಮೀಪ ತಹಶೀಲ್ದಾರ್ ನೇತೃತ್ವದಲ್ಲಿ ಕಲ್ಲಿನ ಕೋರೆಗೆ ದಾಳಿ ನಡೆಸಿ ನಂತರ ಉದ್ದೇಶಪೂರ್ವಕವಾಗಿ ನನ್ಮ ಹೆಸರನ್ನು ಸೇರಿಸಿ ತೇಜೋವಧೆ ಮಾಡಿದ್ದಾರೆ ರಕ್ಷಿತ್ ಶಿವರಾಂ ಒತ್ತಡಕ್ಕೆ ಮಣಿದು ಪೊಲೀಸರು ರಾತ್ರೋರಾತ್ರಿ ನನ್ನನ್ನು ಬಂಧಿಸಿದ್ದಾರೆ. ಅದಲ್ಲದೇ ಸುಮಾರು 27 ದಿನ ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ. ಈ ಕಲ್ಲಿನ ಕೋರೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ತಾಯಿ ಮುಂದೆ ಪ್ರಮಾಣ ಮಾಡುತಿದ್ದೇನೆ. ನನ್ನನ್ನು ಈ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಒತ್ತಡ ಹಾಕಿದ  ರಕ್ಷಿತ್ ಶಿವರಾಂ ಹಾಗೂ ಇದರ ಹಿಂದೆ ಷಡ್ಯಂತ್ರ ಹೂಡಿದ ಎಲ್ಲರಿಗೂ ತಾಯಿ ಮಹಮ್ಮಾಯಿ ಶಿಕ್ಷೆ ನೀಡಲಿ. ಎಂದು ಪ್ರಾರ್ಥಿಸಿದರು. ಈ ಪ್ರಮಾಣದ ವೇಳೆ ಶಾಸಕ ಹರೀಶ್ ಪೂಂಜ ಯುವ ಮೋರ್ಚಾ ,ಉಪಾಧ್ಯಕ್ಷ ಗಣೇಶ್ ಲಾಯಿಲ ಸಿ.ಎ.‌ಬ್ಯಾಂಕ್ ನಿರ್ದೇಶಕ ರಮೇಶ್ ನಲಿಕೆ,ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿಠಲ ಆಚಾರ್ಯ ಗುರುವಾಯನಕೆರೆ,ಯುವ ಮೋರ್ಚಾ  ಕಾರ್ಯದರ್ಶಿ ಹರೀಶ್ ಗೌಡ ಸಂಬೋಳ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಕನ್ನಾಜೆ, ನ.ಪಂ ಸದಸ್ಯ ಶರತ್ ಕುಮಾರ್, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಗುರು ಲಾಯಿಲ.ಹಾಗೂ ಇತರರು ಉಪಸ್ಥಿತರಿದ್ದರು.

Related posts

INICET ಪ್ರವೇಶ ಪರೀಕ್ಷೆ: ಉಜಿರೆಯ ಡಾ|ಶಿವಾನಿಗೆ ದೇಶದಲ್ಲೇ 191ನೇ ರ್ಯಾಂಕ್

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ವಿಶೇಷ ಪೂಜೆ

Suddi Udaya

ನಾಲ್ಕೂರು: ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಗಾತ್ರದ ಮರ, ತುಂಡಾಗಿ ಬಿದ್ದ ವಿದ್ಯುತ್ ಕಂಬ: ತೆರವು ಕಾರ್ಯಾಚರಣೆಯಲ್ಲಿ ಗ್ರಾಮಸ್ಥರು ಭಾಗಿ

Suddi Udaya

ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಚಾರ್ಮಾಡಿ ಹೊಸಮಠ ಪ್ರದೇಶದಲ್ಲಿ ಓಣಂ ಆಚರಣೆ

Suddi Udaya

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya
error: Content is protected !!