37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಿಎ ಪರೀಕ್ಷೆಯಲ್ಲಿ ಮಡಂತ್ಯಾರಿನ ಅಲ್ ಸ್ಟನ್ ಸೋನಿಲ್ ಡಯಾಸ್ ತೇರ್ಗಡೆ

ಬೆಳ್ತಂಗಡಿ: ಅಲ್ ಸ್ಟನ್ ಸೋನಿಲ್ ಡಯಾಸ್ ಅವರು ತಮ್ಮ 22 ನೇ ವಯಸ್ಸಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ಮೇ-2024 ರಲ್ಲಿ ನಡೆಸಿದ ಅಂತಿಮ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಮಡಂತ್ಯಾರು ಕೊಲ್ಪೆದ ಬೈಲಿನ ನಿವಾಸಿಯಾಗಿರುವ ಸಿಲ್ವೇಸ್ಟರ್ ಡಯಾಸ್ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಣಂದೂರಿನ ಶಿಕ್ಷಕಿ ಆಗಿರುವ ಶ್ರೀಮತಿ ಅನಿತಾ ರೇಷ್ಮಾ ಡಿಸೋಜರವರ ಪುತ್ರ.

ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ, ಶಾಲೆ, ಮಡಂತ್ಯಾರು , ಪದವಿ ಪೂರ್ವ ಶಿಕ್ಷಣವನ್ನು ಸಂತ. ಅಲೋಶಿಯಸ್ ಪದವಿ ಪೂರ್ವ ಕಾಲೇಜು, ಮಂಗಳೂರು ಹಾಗು ಪದವಿ ಶಿಕ್ಷಣವನ್ನು ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ (ಸ್ವಾಯತ್ತ) ಬೆಂಗಳೂರಿನಿಂದ ಬಿ.ಕಾಂ (ಅನಾಲಿಟಿಕ್ಸ್) ನಲ್ಲಿ ಪದವಿ ಪಡೆದಿದ್ದಾರೆ.

ಪ್ರಸ್ತುತ ಇವರು ಬೆಂಗಳೂರಿನ ಲ್ಯಾಂಡ್ ಮಾರ್ಕ್ ಗ್ರೂಪ್ ಕಂಪೆನಿಯಲ್ಲಿ ಇಂಡಸ್ಟ್ರಿಯಲ್ ಟ್ರೈನಿಂಗ್ ಮಾಡುತ್ತಿದ್ದಾರೆ. ಇವರು ಆರ್ಟಿಕಲ್ ಶಿಪ್ ನ್ನು ಮಾರ್ಕ್ ಡಿಸೋಜಾ ಅಂಡ್ ಕೋ. , ಬೆಂಗಳೂರು ಇವರಲ್ಲಿ ಮಾಡಿರುತ್ತಾರೆ.

Related posts

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ: ಆದೇಶ ರದ್ದುಪಡಿಸಿದ ಹೈಕೋರ್ಟ್

Suddi Udaya

ವಿದ್ಯಾರ್ಥಿನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಜಾಗೃತಿ ಶಿಬಿರದಲ್ಲಿ ಗಾಲಿಕುರ್ಚಿ ಜಾಥಾ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮ

Suddi Udaya

ತಣ್ಣೀರುಪಂತ ಗ್ರಂಥಾಲಯ ಸಲಹಾ ಸಮಿತಿ ಸಭೆ

Suddi Udaya

ಸಾಮಾಜಿಕ ಜಾಲತಾಣಗಳಲ್ಲಿ ಯುವಕನ ಬಗ್ಗೆ ಸುಳ್ಳು ಸಂದೇಶ: ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!