23.7 C
ಪುತ್ತೂರು, ಬೆಳ್ತಂಗಡಿ
May 19, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಉಜಿರೆ: ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಾಮೂಹಿಕ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ಉಜಿರೆ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಇವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಮಾಲೋಚನ ಸಭೆಯು ಜು.14ರಂದು ಉಜಿರೆ ಪಂಚಾಯತ್ ನ ಆವರಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ರಮೇಶ್ ನಾಯ್ಕ ನಡಿಬೆಟ್ಟು, ಕಾರ್ಯದರ್ಶಿಯಾಗಿ ಪ್ರಶಾಂತ್ ಪೂಜಾರಿ ಬರಮೇಲು, ಕೋಶಾಧಿಕಾರಿಯಾಗಿ ವಿಕ್ಕಿ ಶೆಟ್ಟಿ ಕುಂಟಿನಿ ರವರನ್ನು ಆಯ್ಕೆ ಮಾಡಲಾಯಿತು.ಜೊತೆ ಕಾರ್ಯದರ್ಶಿಗಳಾಗಿ ಚಂದ್ರಶೇಖರ್ ಬಿಲ್ಲರೋಡಿ, ರಮೇಶ್, ಸುದೇಶ್ ಶೆಟ್ಟಿ ಕುಂಟಿನಿ, ಕಾರ್ತಿಕ್ ರಾವ್, ರಿತೇಶ್ ರೆಂಜಾಳ ಉಪಾಧ್ಯಕ್ಷರುಗಳಾಗಿ ಗಿರೀಶ್ ಪೆರ್ಲ, ದಿನೇಶ್ ಮಾತೃಶ್ರೀ, ಜಯಂತ್ ಅರ್ತಿಲ, ಯೋಗೀಶ್ ಸುರ್ಯ, ಉಮೇಶ್ ಕಡ0ಬು, ಪದ್ಮರಾಜ್ ವಿವೇಕಾನಂದ ನಗರ, ಲಕ್ಷ್ಮಣ್ ಕುಂಜರ್ಪ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ನಾಯ್ಕ ರವರು ರಾಷ್ಟೀಯ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಹಿರಿಯ ಕಾರ್ಯಕರ್ತರಾಗಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮ ಸೇವೆಯನ್ನು ನೀಡುತ್ತಾ ಬಂದಿದ್ದು ಕಳೆದ ಮೂರು ವರ್ಷದಿಂದ ಅನಾರೋಗ್ಯ (ಪಕ್ಷಪಾತ) ದಿಂದ ಬಳಲುತ್ತಿದ್ದು ಮನೆಯಲ್ಲಿಯೇ ಇದ್ದರು ಅವರ ಸೇವೆಯನ್ನು ನೆನಪಿಸಿ ಪ್ರಸ್ತುತ ಈ ಬಾರಿಯ ಅಧ್ಯಕ್ಷರನ್ನಾಗಿ ಸರ್ವರ ಅಭಿಮತದಿಂದ ವಿಶೇಷವಾಗಿ ಆಯ್ಕೆ ಮಾಡಲಾಯಿತು.

ಜು.21ರಂದು ಬೆಂಗಳೂರಿನಲ್ಲಿ ನಡೆಯುವ ಅತ್ಯಾಚಾರವಾಗಿ ಹತ್ಯೆಯಾದ ಕು| ಸೌಜನ್ಯ ಹಾಗೂ ಎಲ್ಲಾ ಹೆಣ್ಣು ಮಕ್ಕಳ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಜನಜಾಗೃತಿ ಸಭೆಯ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿಯವರು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು, ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಸಂಚಾಲಕ ಮನೋಜ್ ಕುಂಜರ್ಪ, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರುಗಳಾದ ವೆಂಕಟೇಶ್ ಕಾಶಿಬೆಟ್ಟು, ಉಮೇಶ್ ಅತ್ತಾಜೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಗ್ರಾ.ಪಂ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಬಗ್ಗೆ ಮಾರ್ಚ್ 1ರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಾರ್ವಜನಿಕ ಮಹತ್ವದ ವಿಚಾರದ ಬಗ್ಗೆ ವಿಧಾನಸಭೆ ಸಭಾಪತಿಯವರಿಗೆ ಪತ್ರ

Suddi Udaya

ಮುಂಬಯಿ ಅಜೆಕಾರು ಕಲಾಭಿಮಾನಿಗಳ ಬಳಗದಿಂದ ಯಕ್ಷಗಾನ ಪ್ರದರ್ಶನ: ಉಜಿರೆ ಮಾ| ಆದಿತ್ಯ ಹೊಳ್ಳ ರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಪಿಎಂ ಶ್ರೀ ಮಾದರಿ ಶಾಲಾ ವಾರ್ಷಿಕೋತ್ಸವ

Suddi Udaya

ರೆಖ್ಯಾ ಎಂಜಿರ ಎಂಬಲ್ಲಿ ಆಪಲ್ ಲೋಡ್ ಗಾಡಿ ಪಲ್ಟಿ : ಇಬ್ಬರು ಪ್ರಾಣಾಪಾಯದಿಂದ ಪಾರು

Suddi Udaya

ಆರಂಬೋಡಿ: ಗಂಟಲಿನ ಚಿಕ್ಕ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವ 2ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗಿ

Suddi Udaya

ಕಳಿಯ : ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಾವಿನಕಾಯಿಯನ್ನು ಹೋಲುವ ಕೋಳಿ ಮೊಟ್ಟೆ

Suddi Udaya
error: Content is protected !!