37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಸಂಘ-ಸಂಸ್ಥೆಗಳು

ಬಾರ್ಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರು ಪಂಥ ವಲಯದ ಬಾರ್ಯ ಒಕ್ಕೂಟಗಳ ಪದಗ್ರಹಣ ಸಮಾರಂಭ ಶ್ರೀ ರಾಮಾಂಜನೇಯ ಬಜನಾ ಮಂದಿರದ ಸಬಾಭವನದಲ್ಲಿ ಜರಗಿತು.

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅದ್ಯಕ್ಷರಾದ ಪ್ರವೀಣ್ ರೈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ಜೀವನ ಪದ್ಧತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಡಾ|| ಡಿ ವೀರೇಂದ್ರ ಹೆಗ್ಗಡೆ ಯವರ ಸೇವೆ ಅನನ್ಯವಾಗಿದೆ ಅರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಧಾರ್ಮಿಕವಾಗಿ ಯಾವ ರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ ನಮ್ಮನ್ನ ನಾವು ನಿಯಮದೊಳಗೆ ಅಳವಡಿಸಿಕೊಂಡಾಗ ಸ್ವ ಸಹಾಯ ಸಂಘಗಳನ್ನೂ ಯಶಸ್ವಿಯಾಗಿ ನಿರ್ವಹಣೆ ಮಾಡಲು ಸಾಧ್ಯ ಅಗುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ ಅದನ್ನ ಉಳಿಸಿಕೊಳ್ಳುವುದು ಬಹಳ ಮುಖ್ಯ ಬೆಳ್ತಂಗಡಿ ತಾಲೂಕಿನ ಜನರ ಪೂರ್ಣ ಬೆಂಬಲ ಹಾಗೂ ಸಹಕಾರದಿಂದ ರಾಜ್ಯಾದ್ಯಂತ ಪೂಜ್ಯರು ಯೋಜನೆಯ ಕಾರ್ಯಕ್ರಮಗಳನ್ನ ವಿಸ್ತರಿಸಿದರು ಸಂಸ್ಥೆಯು ಬೃಹತ್ತ ಕಾರವಾಗಿ ಬೆಳೆದಿದೆ ಇದಕ್ಕೇ ಕಾರಣ ಬೆಳ್ತಂಗಡಿ ತಾಲೂಕಿನ ಜನರ ಸಹಕಾರ ಎಂದರು. ಕೃಷಿ ಚಟುವಟಿಕೆಗಳಲ್ಲಿನ ಸಮಸ್ಯೆಗಳನ್ನ ಗಮನಿಸಿ ಕೃಷಿ ಅಬಿವೃದ್ಧಿ ಕಾರ್ಯಕ್ರಮಗಳಿಗೆ ಯೋಜನೆಯ ಮೂಲಕ ಉತ್ತೇಜನ ನೀಡಲಾಯಿತು ಪರಿಣಾಮ ರೈತರಲ್ಲಿ ಆದಾಯದ ಪ್ರಮಾಣ ಹೆಚ್ಚಾಯಿತು ಕೃಷಿಯಲ್ಲಿ ಸ್ವತಃ ತಾವೇ ತೊಡಗಿಕೊಂಡಾಗ ಲಾಭ ದಾಯಕವಾಗುತ್ತದೆ ಯುವ ಜನಾಂಗವನ್ನು ಕೃಷಿಯ ಕಡೆಗೆ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ವಿವರಿಸಿದರು 76 ವರ್ಷದ ಇಳಿ ವಯಸ್ಸಿನಲ್ಲೂ ಪೂಜ್ಯರು ಯೋಜನೆಯ ಮೂಲಕ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರಲು ಯಾವುದೇ ಪ್ರತೀ ಫಲಾಪೇಕ್ಷೆ ಇಲ್ಲದೇ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಅವಕಾಶಗಳನ್ನ ಸದುಪಯೋಗ ಪಡಿಸಿಕೊಂಡಗ ಅಭಿವೃದ್ದಿ ಹೊಂದಲು ಸಾಧ್ಯ ಅಗುತ್ತದೆ ಎಂದರು.

ವೇದಿಕೆಯಲ್ಲಿ ದೇವಿಪ್ರಸಾದ್ ಕಡಮ್ಮಜೆ ಪ್ರಗತಿಪರ ಕೃಷಿಕರು ಹಾಗೂ ಯುವ ಉದ್ಯಮಿ, ಗೋಪಾಲ ಕೃಷ್ಣ ಅದ್ಯಕ್ಷರು ರಾಮಾಂಜನೇಯ ಬಜನ ಮಂಡಳಿ ಪಿಲಿಗೂಡು, ಗುಣಾಕರ ಅಗ್ನಡಿ, ಮೋನಪ್ಪ ಗೌಡ ಪುತ್ತಿಲ ತಾಲೂಕ ಜನ ಜಾಗೃತಿ ವೇದಿಕೆ ಸದಸ್ಯರು, ಬಾರ್ಯ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನೂತನ ಅಧ್ಯಕ್ಷರಾದ ಮೋಹನ ಗೌಡ , ತಾಲೂಕ್ ಯೋಜನಾಧಿಕಾರಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಬೆಳಿಯಪ್ಪ ಗೌಡ ವಹಿಸಿದ್ದರು.

ಸೇವಾಪ್ರತಿನಿಧಿ ವಿಶಾಲಾಕ್ಷಿ ವರದಿ ಮಂಡಿಸಿದರು, ವಲಯ ಮೇಲ್ವಿಚಾರಕರಾದ ಗುಣಕರ್ ಸ್ವಾಗತಿಸಿದರು ತೆಕ್ಕಾರು ಸೇವಾ ಪ್ರತಿನಿಧಿ ಶಿವರಾಮ್ ನಿರೂಪಿಸಿದರು

Related posts

ಉಜಿರೆಯಲ್ಲಿ ಸುಗಂಧಿ’ ಸ್ ಗಲ್ಲಿ ಕಿಚನ್ ಹೋಟೆಲ್ ಉದ್ಘಾಟನೆ

Suddi Udaya

ಕುಕ್ಕೇಡಿ: ಸುಡುಮದ್ದು ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಬಂಧನ: ಬಂಧಿತ ಮೂವರಿಗೂ ಫೆ.17ರವರೆಗೆ ನ್ಯಾಯಾಂಗ ಬಂಧನ

Suddi Udaya

ಬೆಳ್ತಂಗಡಿ ತಾ.ಪಂ. ನ ಕಾರ್ಯನಿರ್ವಾಹಕಾಧಿಕಾರಿಯಾಗಿ ವೈಜಣ್ಣ ಕರ್ತವ್ಯಕ್ಕೆ ಹಾಜರು

Suddi Udaya

ಅಂತರ್ ರಾಜ್ಯ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಎಸ್.ಡಿ.ಎಂ ಕಾಲೇಜಿಗೆ ಪ್ರಶಸ್ತಿ

Suddi Udaya

ಕರ್ನಾಟಕ ಸೀರೋ ಮಲಬಾರ್ ಕಥೋಲಿಕ್ ಅಸೋಸಿಯೇಷನ್ ವತಿಯಿಂದ ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಕೋರಿ ಜನಾಂದೋಲನ ಪ್ರತಿಭಟನೆ

Suddi Udaya

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ರವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

Suddi Udaya
error: Content is protected !!