April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಸೌತಡ್ಕ: ಸತ್ತ ಕರುವೊಂದನ್ನು ಮೋರಿಗೆ ಎಸೆದ ದುಷ್ಕಾರ್ಮಿಗಳು: ಹಿಂ.ಜಾ. ವೇದಿಕೆ ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಸದಸ್ಯರಿಂದ ಅಂತ್ಯಸಂಸ್ಕಾರ

ಕೊಕ್ಕಡ: ಸತ್ತು ಮೋರಿಯಲ್ಲಿ ಎಸೆದು ಹೋಗಿದ್ದ ಕರುವಿನ ಅಂತ್ಯಸಂಸ್ಕಾರವನ್ನು ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಸದಸ್ಯರು ಮಾಡಿರುವ ಘಟನೆ ಜು.15ರಂದು ವರದಿಯಾಗಿದೆ.

ಕೊಕ್ಕಡದ ಸೌತಡ್ಕ ಬಳಿ ಅಪರಿಚಿತರು ಸತ್ತ ಕರುವೊಂದನ್ನು ಮೋರಿಗೆ ಎಸೆದು ಹೋಗಿದ್ದು ಈ ಬಗ್ಗೆ ಮಾಹಿತಿ ಪಡೆದ ಕೊಕ್ಕಡ ಪಿಡಿಓ ಅವರು ಕರುವಿನ ಅಂತ್ಯ ಸಂಸ್ಕಾರ ಮಾಡುವ ಉದ್ದೇಶದಿಂದ ಕೊಕ್ಕಡದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಸಂಘಟನೆಯ ಕಾರ್ಯಕರ್ತರು ಸತ್ತ ಕರುವನ್ನು ಮೋರಿಯಿಂದ ಹೊರತೆಗೆದು ಅಲ್ಲೇ ಸಮೀಪ ಅಂತ್ಯಸಂಸ್ಕಾರ ಮಾಡಿದರು.

ಮೋರಿಯ ಸಮೀಪ ಗಾಡಿಯೊಂದು ನಿಂತ ಕುರುಹುಗಳು ಕಂಡುಬಂದಿದ್ದು, ಸಮೀಪದಲ್ಲೇ ಅಕ್ರಮ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿರುವ ಗುಮಾನಿ ಯಿದ್ದು, ಯಾರೋ ಕಿಡಿಗೇಡಿಗಳು ಕಸಾಯಿಖಾನೆಗೆ ತಂದ ಕರು ದಾರಿಮಧ್ಯೆ ಸತ್ತಿರುವ ಕಾರಣ ಎಸೆದು ಹೋಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Related posts

ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 12ನೇ ಸಹಾಯಧನ ಹಸ್ತಾಂತರ

Suddi Udaya

93 ವರ್ಷ ಪ್ರಾಯದ ವಿಶ್ರಾಂತ ಮುಖ್ಯ ಶಿಕ್ಷಕ ನಾರಾಯಣ ಪ್ರಭುರವರಿಗೆ ಗೌರವಾರ್ಪಣೆ

Suddi Udaya

ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಬೆಳ್ತಂಗಡಿ: ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ಘಟಕದ ಕೋರ್ ಕಮಿಟಿಯ ಸಭೆ

Suddi Udaya

ಧರ್ಮಸ್ಥಳ: ಪುನಶ್ಚೇತನಾ ಕಾರ್ಯಾಗಾರದ ಸಮಾರೋಪ ಸಮಾರಂಭ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನ

Suddi Udaya

ವಿಪರೀತ ಗಾಳಿ ಮಳೆ: ನೇಲ್ಯಡ್ಕ ಕೆ.ವಿ. ಅಬ್ರಹಾಂ ರವರ ಮನೆಗೆ ಬಿದ್ದ ವಿದ್ಯುತ್ ಕಂಬ

Suddi Udaya
error: Content is protected !!