April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

‘ಆಸರೆ’ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’ ಮತ್ತು ಅಭಿನಂದನಾ ಸಮಾರಂಭ

ಉಜಿರೆ: ‘ಆಸರೆ’ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’ ಮತ್ತು ಅಭಿನಂದನಾ ಸಮಾರಂಭವು ಉಜಿರೆಯ ರುಡ್ ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಜು.14ರಂದು ಜರಗಿತು.

ರುಡ್ ಸೆಟ್ ಸಂಸ್ಥೆಗಳ ಕೇಂದ್ರ ಕಛೇರಿಗೆ ನಿಯೋಜನೆಗೊಂಡ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ್ ಕುಮಾರ್, ಉಜಿರೆ ರುಡ್ ಸಂಸ್ಥೆಗೆ ನಿಯೋಜನೆಗೊಂಡ ನಿರ್ದೇಶಕ ಅಜಯ್ ಕುಮಾರ್, ಉಜಿರೆ ರುಡ್ ಸೆಟ್ ಸಂಸ್ಥೆಗೆ ನಿಯೋಜನೆಗೊಂಡ ಉಪನ್ಯಾಸಕ ಕರುಣಾಕರ್ ಜೈನ್, ಕೇಂದ್ರ ಕಛೇರಿಗೆ ನಿಯೋಜನೆಗೊಂಡ ಅನಸೂಯ ರೈ ಹಾಗೂ ಲೋಹಿತ್ ಕುಮಾರ್ ಜೈನ್ ಇವರನ್ನು ಗೌರವಿಸಲಾಯಿತು.

ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಉದ್ಯಮದಲ್ಲಿನ ಅಭಿವೃದ್ಧಿಗೆ ಪೂರಕವಾಗುವ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಸಲಹೆ ನೀಡಿದರು.

ಆನಂದ್ ಕನ್ಯಾಡಿ ಇವರು ಆಟಿ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು ಹತ್ತು ಬಗೆಯ ಆಟಿ ತಿಂಗಳ ತಿನಸುಗಳನ್ನು ಸದಸ್ಯರು ಮನೆಯಲ್ಲಿಯೇ ತಯಾರಿಸಿ ತಂದಿದ್ದರು.

ಹಿರಿಯ ಉಪನ್ಯಾಸಕ ಅಬ್ರಾಹಂ ಜೇಮ್ಸ್ ಪ್ರಸ್ತಾವನೆಗೈದರು. ‘ಆಸರೆ’ ಸಂಘದ ಅಧ್ಯಕ್ಷ ಪ್ರಶಾಂತ್ ಕುದ್ಯಾಡಿ ಸ್ವಾಗತಿಸಿದರು. ಮಾಧವಿ ರೈ ವಂದಿಸಿ, ಗೌತಮ್ ಕುಕ್ಯಾನ್ ನಿರೂಪಿಸಿದರು.

Related posts

ನ್ಯಾಯ್ಯತರ್ಪು: ಮನೆಗಳಿಗೆ ಸಿಡಿಲು ಬಡಿದು ಹಾನಿ: ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ

Suddi Udaya

ಕ್ಯಾನ್ಸರ್ ಪೀಡಿತರಿಗೆ ಕೇಶದಾನಗೈದು ಮಾದರಿಯಾದ ಶಿರ್ಲಾಲುವಿನ ರಾಜಶ್ರೀ ಜಗದೀಶ್

Suddi Udaya

ಆ. 9 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ ಮಚ್ಚಿನದ ರುದ್ರಭೂಮಿ

Suddi Udaya

ಪ್ರಸನ್ನ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಉಪನ್ಯಾಸ

Suddi Udaya

ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya
error: Content is protected !!