September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

‘ಆಸರೆ’ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’ ಮತ್ತು ಅಭಿನಂದನಾ ಸಮಾರಂಭ

ಉಜಿರೆ: ‘ಆಸರೆ’ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’ ಮತ್ತು ಅಭಿನಂದನಾ ಸಮಾರಂಭವು ಉಜಿರೆಯ ರುಡ್ ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಜು.14ರಂದು ಜರಗಿತು.

ರುಡ್ ಸೆಟ್ ಸಂಸ್ಥೆಗಳ ಕೇಂದ್ರ ಕಛೇರಿಗೆ ನಿಯೋಜನೆಗೊಂಡ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ್ ಕುಮಾರ್, ಉಜಿರೆ ರುಡ್ ಸಂಸ್ಥೆಗೆ ನಿಯೋಜನೆಗೊಂಡ ನಿರ್ದೇಶಕ ಅಜಯ್ ಕುಮಾರ್, ಉಜಿರೆ ರುಡ್ ಸೆಟ್ ಸಂಸ್ಥೆಗೆ ನಿಯೋಜನೆಗೊಂಡ ಉಪನ್ಯಾಸಕ ಕರುಣಾಕರ್ ಜೈನ್, ಕೇಂದ್ರ ಕಛೇರಿಗೆ ನಿಯೋಜನೆಗೊಂಡ ಅನಸೂಯ ರೈ ಹಾಗೂ ಲೋಹಿತ್ ಕುಮಾರ್ ಜೈನ್ ಇವರನ್ನು ಗೌರವಿಸಲಾಯಿತು.

ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ಉದ್ಯಮದಲ್ಲಿನ ಅಭಿವೃದ್ಧಿಗೆ ಪೂರಕವಾಗುವ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಸಲಹೆ ನೀಡಿದರು.

ಆನಂದ್ ಕನ್ಯಾಡಿ ಇವರು ಆಟಿ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ಸುಮಾರು ಹತ್ತು ಬಗೆಯ ಆಟಿ ತಿಂಗಳ ತಿನಸುಗಳನ್ನು ಸದಸ್ಯರು ಮನೆಯಲ್ಲಿಯೇ ತಯಾರಿಸಿ ತಂದಿದ್ದರು.

ಹಿರಿಯ ಉಪನ್ಯಾಸಕ ಅಬ್ರಾಹಂ ಜೇಮ್ಸ್ ಪ್ರಸ್ತಾವನೆಗೈದರು. ‘ಆಸರೆ’ ಸಂಘದ ಅಧ್ಯಕ್ಷ ಪ್ರಶಾಂತ್ ಕುದ್ಯಾಡಿ ಸ್ವಾಗತಿಸಿದರು. ಮಾಧವಿ ರೈ ವಂದಿಸಿ, ಗೌತಮ್ ಕುಕ್ಯಾನ್ ನಿರೂಪಿಸಿದರು.

Related posts

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ವೇಣೂರು: ತುಂಬೆದಲ್ಕೆ ನಿವಾಸಿ ಕೃಷಿಕ ಸೇಸಪ್ಪ ಪೂಜಾರಿ ನಿಧನ

Suddi Udaya

ಚಾಮಾ೯ಡಿ ಘಾಟಿಯಲ್ಲಿ ಬಸ್ಸು ಲಾರಿ ಮುಖಾಮುಖಿ ಡಿಕ್ಕಿ: ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್

Suddi Udaya

ಪುದುವೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಮೋಹನ್ ಕೆ ಮತ್ತು ಕುಟುಂಬಸ್ಥರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಪಣಕಜೆ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

Suddi Udaya

ಸಂಸ್ಕೃತಿಯ ಉಳಿವಿಗಾಗಿ ಸಂಸ್ಕೃತದ ಉಳಿಯುವಿಗೆ ಮುಖ್ಯವಾಗಿದೆ : ಡಾ. ಕಲ್ಲಡ್ಕ ಪ್ರಭಾಕರ ಭಟ್

Suddi Udaya
error: Content is protected !!