28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾಳ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ ಹಾಗೂ ಪದಾಧಿಕಾರಿಗಳು ಆಯ್ಕೆಯು ಜು.16 ರಂದು ನಾಳ ಹಾಲು ಉತ್ಪಾದಕರ ಸಹಕಾರಿ ಸಂಘ ಸಭಾಭವನದಲ್ಲಿ ನಡೆಯಿತು.


ನ್ಯಾಯತರ್ಪು ಒಕ್ಕೂಟದ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದಪ್ಪ ಗೌಡ ಹೆಚ್. ವಹಿಸಿದರು. ನೂತನ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಆರ್. ಶೆಟ್ಟಿ ನಾಳ, ಉಪಾಧ್ಯಕ್ಷೆ ಪುಷ್ಪ್ಪ ನಾಳ, ಪ್ರಧಾನ ಕಾರ್ಯದರ್ಶಿ ಶಾಲಿನಿ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ಸಂದ್ಯಾ ನಾಳ, ಕೋಶಾಧಿಕಾರಿ ಮಮತಾ ವಿ.ಅಳ್ವ ನಾಳ ಇವರನ್ನು ಸರ್ವಾನುಮತದಿಂದ ಆಯ್ಕೆ ನಡೆಯಿತು.

ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.23 ರಂದು ನಡೆಸುವುದಾಗಿ ತೀರ್ಮಾನಿಸಲಾಯಿತು. ಪೂಜಾ ಪೂರ್ವ ತಯಾರಿ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಹರೀಶ್ ಗೌಡ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಭೆಯಲ್ಲಿ ಸೂಕ್ತ ಸಲಹೆಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ನ್ಯಾಯತರ್ಪು ಗ್ರಾಮ ಸಮಿಬ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಕೆ,ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ವಿಜಯ ಕುಮಾರ್ ಕಲಾಯಿತೊಟ್ಟು, ನಾಳ ದೇವಸ್ಥಾನ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಪತ್ರಕರ್ತ ಕೆ.ಎನ್.ಗೌಡ. ಕಲಾಯಿತೊಟ್ಟು, ನಾಳ ಶ್ರೀ ದುರ್ಗ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ಸಮಿತಿ ಸದಸ್ಯೆ ಪುಷ್ಪ ದೇವಿನಗರ ಹಾಗೂ ಸೇವಾ ಪ್ರತಿನಿಧಿ ಸೌಮ್ಯ ವಿ.ಶೆಟ್ಟಿ ಭಾಗವಹಿಸಿದರು.

Related posts

ಸುಲ್ಕೇರಿಮೊಗ್ರುವಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಗುರುಜಯಂತಿ ಆಚರಣೆ: ಮಹಿಳಾ ಬಿಲ್ಲವ ವೇದಿಕೆ ಉದ್ಘಾಟನೆ,ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

Suddi Udaya

ಜ.20: ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ

Suddi Udaya

ಗುರುವಾಯನಕೆರೆ ಭೂಷಣ್ ಬಾರ್ ಮಾಲಕ ಭಾಸ್ಕರ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ-ಅನ್ವೇಷಣಾ-2024

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮೂಹೂರ್ತ, ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!