April 2, 2025
ತಾಲೂಕು ಸುದ್ದಿ

ಕನ್ಯಾಡಿ ದೇವರಗುಡ್ಡೆ ಗುರುದೇವ ಮಠಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ:

ಕನ್ಯಾಡಿ : ದಕ್ಷಿಣದ ಅಯೋಧ್ಯೆ ಎಂದೇ ಪ್ರಸಿದ್ಧಿ ಪಡೆದಿರುವ ಕನ್ಯಾಡಿ ದೇವರಗುಡ್ಡೆ ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕೇಂದ್ರ ಸರಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಇಂದು ಸಂಜೆ ಕನ್ಯಾಡಿಯ ಶ್ರೀ ಗುರುದೇವ ಮಠಕ್ಕೆ ಆಗಮಿಸಿದರು.

ನಂತರ ಶ್ರೀ ಕ್ಷೇತ್ರದ ಪೀಠಾಧಿಪತಿ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ಸಚಿವ ವಿ. ಸೋಮಣ್ಣ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವ ವಿ. ಸೋಮಣ್ಣ ಅವರನ್ನು ಕ್ಷೇತ್ರದ ಪರವಾಗಿ ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಂ ಡಿ. ಹಾಗೂ ಇತರರು ಉಪಸ್ಥಿತರಿದ್ದರು.

Related posts

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಉಜಿರೆ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ ಸಾಧನಾ ಸಭಾಭವನದಲ್ಲಿ ಶೇ 50 ರಿಯಾಯಿತಿ ದರದಲ್ಲಿ ಬಟ್ಟೆಗಳ ಬೃಹತ್ ಮಾರಾಟ ಮೇಳ

Suddi Udaya

ಚಾರ್ಮಾಡಿಯಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

Suddi Udaya

ಭಾರಿ ಗಾಳಿ ಮಳೆಗೆ ಹಾನಿಗೀಡಾದ ಮನೆ, ಶಾಲೆ, ಮದರಸಗಳಿಗೆ ನಾವೂರು ಗ್ರಾ.ಪಂ ನಿಂದ ಭೇಟಿ ಪರಿಶೀಲನೆ

Suddi Udaya

ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಗೆ ಹೆಚ್ಚುವರಿ ರೂ.50 ಲಕ್ಷ ಅನುದಾನ ಮಂಜೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya
error: Content is protected !!