24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ವೇಣೂರು ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಿಂದ ರಕ್ಷಿತ್ ಶಿವರಾಂರವರಿಗೆ ಅಭಿನಂದನೆ

ವೇಣೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವೇಣೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಜಮೀನು ಮಂಜೂರು ಮಾಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಈ ಜಮೀನು ಮಂಜೂರಾತಿಗಾಗಿ ಸರ್ಕಾರದ ಅಂತಿಮ ಅನುಮೋದನೆಗಾಗಿ ಅವಿರತ ಪ್ರಯತ್ನ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ ವೇಣೂರು ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಅಧ್ಯಕ್ಷರು, ಬೆಳ್ತಂಗಡಿ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಪಿತಾಂಬರ ಹೇರಾಜೆ, ವೇಣೂರು ಸಂಘದ ಅಧ್ಯಕ್ಷರಾದ ಹರೀಶ್ ಪೊಕ್ಕಿ, ಕಾರ್ಯದರ್ಶಿ ರಾಕೇಶ್ ಮೂಡುಕೋಡಿ, ಕೋಶಾಧಿಕಾರಿ ಯೋಗಿಶ್ ಬಿಕ್ರೋಟ್ಟು, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ನಿತೀಶ್ ಕೋಟ್ಯಾನ್ , ಬೆಳ್ತಂಗಡಿ ಸಂಘದ ನಿರ್ದೇಶಕರಾದ ವಿಶ್ವನಾಥ ದಡ್ಡಲಪಲ್ಕೆ, ಹಾಗೂ ಪ್ರಮುಖರಾದ ರಮೇಶ್ ಪೂಜಾರಿ ಪಡ್ಡಾಯಿಮಜಲು, ನವೀನ್ ಪಚ್ಚೇರಿ, ಸತೀಶ್ ಉಜಿರ್ದಡ್ಡ, ಶೇಖರ್ ಪೂಜಾರಿ, ಸುರೇಶ್ ಪೂಜಾರಿ ಕರಿಮಣೇಲು, ರವಿ ಪೂಜಾರಿ ಮೂಡುಕೊಡಿ ಉಪಸ್ಥಿತರಿದ್ದರು.

Related posts

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ವತಿಯಿಂದ, ಉಜಿರೆ ಎಸ್‌.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ಉಚಿತ ಇಸಿಜಿ ತಪಾಸಣಾ ಶಿಬಿರ,194 ಮಂದಿಗೆ ತಪಾಸಣೆ

Suddi Udaya

ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ

Suddi Udaya

ನಾಳ ಶ್ರೀ ದೇವಸ್ಥಾನದ ರಥಬೀದಿಯಲ್ಲಿ ಶನೀಶ್ವರ ಮಹಾತ್ಮೆ ಬಯಲಾಟ

Suddi Udaya

ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya
error: Content is protected !!