ಬೆಳ್ತಂಗಡಿ: ‘ಮಚ್ಚಿನ ‘ಎಂಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಹಿರಿಮೆಗೊಂದು ಪ್ರಶಸ್ತಿಯ ಗರಿ ಲಭಿಸಿದೆ.
ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಇದರ ವತಿಯಿಂದ ಕೊಡಲ್ಪಡುವ ” ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯ ಮಟ್ಟದ ಶಾಲಾ ಪ್ರಶಸ್ತಿ 2024″ ಗೆ ಮಚ್ಚಿನ ಸರಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ.
ಈ ಪ್ರಶಸ್ತಿಯು ರೂ. 10 ಸಾವಿರ ನಗದು ಪುರಸ್ಕಾರ ಹಾಗೂ ಹಸಿರು ನೈರ್ಮಲ್ಯ ಶಾಲಾ ಪ್ರಮಾಣಪತ್ರ ಒಳಗೊಂಡಿದೆ.