ಗೇರುಕಟ್ಟೆ : ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ಶ್ರೀಮತಿ ರೂಪಾ ರವರ ಮನೆಯ ಕೋಳಿ ಗೂಡಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ ಹಾಗೂ 1 ಕಿ.ಲೋ ತೂಕದ 5 ಕೋಳಿಗಳನ್ನು ರಾತ್ರಿ ವೇಳೆಯಲ್ಲಿ ನುಂಗಿ ಗೂಡಿನಲ್ಲಿಯೇ ಪತ್ತೆಯಾದ ಘಟನೆ ಜು.19 ರಂದು ನಡೆಯಿತು.
ಕಳೆದ 6 ತಿಂಗಳಿಂದ ಉಪ ಕಸುಬಾಗಿ ನಾಟಿ ಕೋಳಿ ಸಾಕಾಣಿಕೆ ಮಾಡಿ ಮಾಡಿಕೊಂಡು ಬರುತ್ತಿದ್ದಾರೆ. ಕೋಳಿ ಗೂಡಿಗೆ ಕಬ್ಬಿಣದ ಮೇಸ್ ಅಳವಡಿಸಿದ ಭದ್ರತೆಯ ಮಧ್ಯೆಯೂ ಸುಮಾರು 35 ಕಿ.ಲೋ ತೂಕದ ಹೆಬ್ಬಾವು ಪತ್ತೆಯಾಗಿದೆ. ಪಕ್ಕದ ಮನೆಯ ವಸಂತ ಗೌಡ, ಗಿರಿಯಪ್ಪ ಗೌಡ,ಉಮೇಶ ಗೌಡ ಮತ್ತು ಮನೆಯವರು ಸೇರಿ ಹೆಬ್ಬಾವನ್ನು ಹಿಡಿದು ಪಕ್ಕ ದೊಡ್ಡ ಕಾಡಿಗೆ ಬಿಟ್ಟು ಬಂದಿದ್ದಾರೆ.
ಉರಗ ತಜ್ಞರು ಹೇಳುವಂತೆ ಮಳೆಗಾಲ ಸಮಯದಲ್ಲಿ ವಿಷ ಜಂತು ಹಾವುಗಳು ಮನೆ ಪಕ್ಕದ ಆಸುಪಾಸಿನಲ್ಲಿರುವ ಗುಡಿಸಲಿನಲ್ಲಿ ನೆಲೆಸುತ್ತವೆ. ಅದುದರಿಂದ ಜನರು ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳುತ್ತಾರೆ.
ವರದಿ: ಕೆ.ಎನ್. ಗೌಡ