ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ 2023- 24 ನೇ ಸಾಲಿನ ಮಹಾಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನ ಬೆಳ್ತಂಗಡಿ ಯಲ್ಲಿ ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಡಾ . ಮೋಹನ್ ಆಳ್ವ ರವರು ಕಾರ್ಯ ಕ್ರಮವನ್ನು ಉದ್ಘಾಟಿಸಿ, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ಸ್ ಗೈಡ್ಸ್ ದಳಗಳು ಪ್ರಾರಂಭವಾಗಿ, ಚಟುವಟಿಕೆಗಳು ನಡೆಯಬೇಕು. ಉತ್ತಮ ಗುಣ, ಶಿಸ್ತು, ಸಮಾಜವನ್ನು ಎದುರಿಸುವ ಗುಣ ಮಕ್ಕಳಲ್ಲಿ ಹುಟ್ಟಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿ ಸ್ಕೌಟ್ ಭವನದ ನಿರೀಕ್ಷೆಯು ನಮ್ಮದಾಗಿದೆ. ಮಾನ್ಯ ಶಾಸಕರು ಸಂಪೂರ್ಣ ಸಹಕಾರ ಸ್ಕೌಟ್ಸ್ ಗೈಡ್ಸ್ ಭವನಕ್ಕೆ ನೀಡಲಿದ್ದಾರೆ ಎಂಬುದನ್ನು ತಿಳಿಸಿದರು. ಬಳಿಕ ರಾಜ್ಯಸಂಸ್ಥೆಯಿಂದ ನೀಡಲ್ಪಟ್ಟ ವಾರ್ಷಿಕ ವರದಿ ಪುಸ್ತಕವನ್ನು ಮಾನ್ಯ ಶಾಸಕರಿಂದ ಬಿಡುಗಡೆಗೊಳಿಸಲಾಯಿತು.
2023-24 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ವರದಿಯನ್ನು ಕಾರ್ಯದರ್ಶಿಗಳಾದ ಪ್ರಮೀಳ ಮಂಡಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿಗಳಾದ ಶ್ರೀ ಬೆಳಿಯಪ್ಪ ಕೆ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿಗಳಾದ ಭವಾನಿ ಶಂಕರ್ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸಂಪೂರ್ಣ ಬೆಂಬಲ ಇಲಾಖೆಯಿಂದ ನೀಡುವುದಾಗಿ ಭರವಸೆ ಕೊಟ್ಟರು. ಮಕ್ಕಳ ಜೀವನದಲ್ಲಿ ಸ್ಕೌಟ್ ಗೈಡ್ ಅತ್ತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವಧ್ಯಕ್ಷರಾದ ಮಾನ್ಯ ಶಾಸಕರು ಮಾತನಾಡಿ ಮಕ್ಕಳು ಸಾವಯವಯುಕ್ತವಾದ ತರಕಾರಿಗಳನ್ನು ಮನೆಯಲ್ಲಿ ಬೆಳೆಸಿ , ಬಳಸುವ ಸಂಕಲ್ಪವನ್ನುಮಾಡಬೇಕಾಗಿದೆ. ನಾವು ಬಳಸುವ ಆಹಾರದಲ್ಲಿ ಹಲವಾರು ಕಾಯಿಲೆಗೆ ಒಳಗಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಸ್ಕೌಟ್ಸ್ ಗೈಡ್ಸ್ ಗಳು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಶ್ರೀ ಸಿದ್ದಲಿಂಗ ಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ, ಜಿಲ್ಲಾ ಸಹಾಯಕ ಆಯುಕ್ತರುಗಳಾದ ಶ್ರೀ ವಿಠಲ್ ಶೆಟ್ಟಿ , ಬಿ ಸೋಮಶೇಖರ್ ಶೆಟ್ಟಿ,ರಾಜ್ಯ ಸಹಾಯಕ ಸಂಘಟಕರಾದ ಭರತ್ ರಾಜ್ ಕೆ ಉಪಸ್ಥಿತರಿದ್ದರು.*
2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕಗಳಿಸಿದ ಸ್ಕೌಟ್ಸ್ ಗೈಡ್ಸ್ ಹಾಗೂ ರೋವರ್ ರೇಂಜರ್ಸ್ ಗಳನ್ನು ಸನ್ಮಾನಿಸಲಾಯಿತು.*
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ಹೊಸದಾಗಿ ಮೂಲ ತರಬೇತಿ ಪಡೆದುಕೊಂಡ ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್, ಫ್ಲಾಕ್ ಲೀಡರ್,ಕಬ್ ಮಾಸ್ಟರ್, ಬನ್ನಿ ಲೀಡರ್ಸ್, ರೋವರ್ಸ್ ಸ್ಕೌಟ್ ಲೀಡರ್ ರೆಂಜರ್ಸ್ ಲೀಡರ್ಗಳನ್ನು ಹೂ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ,ಅಧ್ಯಕ್ಷರುಗಳು, ಶಾಲಾ ಮುಖ್ಯ ಶಿಕ್ಷಕರು, ಸ್ಕೌಟ್ ಮಾಸ್ಟರ್ ,ಗೈಡ್ಸ್ ಕ್ಯಾಪ್ಟನ್, ಬನ್ನಿ ಲೀಡರ್ಸ್, ಕಬ್ ಮಾಸ್ಟರ್, ಫ್ಲಾಕ್ ಲೀಡರ್,ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಕೌಟ್ಸ್,ಗೈಡ್ಸ್,ರೋವರ್ಸ,ರೆಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ರೋವರ್ ಸ್ಕೌಟ್ ಲೀಡರ್ ಶ್ರೀ ಲಕ್ಷ್ಮೀಶ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜ್ ಉಜಿರೆ, ಸ್ವಾಗತವನ್ನು ಅಧ್ಯಕ್ಷರಾದ ಶ್ರೀ ಎಚ್ ಪದ್ಮ ಕುಮಾರ್, ಧನ್ಯವಾದವನ್ನು ಕಾರ್ಯದರ್ಶಿಗಳಾದ ಪ್ರಮೀಳಾ ನೆರವೇರಿಸಿ ಕೊಟ್ಟರು.*
ಎಸ್ ಡಿ ಎಮ್ ಪದವಿ, ಹಾಗೂ ಪದವಿ ಪೂರ್ವ ಕಾಲೇಜು ಉಜಿರೆ , ವಾಣಿ ಪದವಿ ಪೂರ್ವ ಕಾಲೇಜಿನ ರೋವರ್ಸ್ ರೇಂಜರ್ಸ್ ಸ್ವಯಂಸೇವಕರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು