31.1 C
ಪುತ್ತೂರು, ಬೆಳ್ತಂಗಡಿ
November 24, 2024
ತಾಲೂಕು ಸುದ್ದಿವರದಿ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿನಿಯೋಗಿಸಿರುವ ಅನುದಾನವೆಷ್ಟು,? ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ರವರ ಪ್ರಶ್ನೆಗೆ ಸಚಿವರ ಉತ್ತರ

ಬೆಳ್ತಂಗಡಿ : ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಲ್ಯಾಣಕ್ಕಾಗಿ ಮಕ್ಕಳ 2023-24ನೇ ಸಾಲಿನಲ್ಲಿ ವಿನಿಯೋಗಿಸಿರುವ ಅನುದಾನವೆಷ್ಟು, ಹಾಗೂ ಅನುದಾನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಒದಗಿಸಿರುವ ವಿವಿಧ ಸೌಲಭ್ಯಗಳು ಯಾವುವು; ಪ್ರತಿ ಸೌಲಭ್ಯಕ್ಕೆ ವಿನಿಯೋಗಿಸಿರುವ ಅನುದಾನದ ವಿವರಗಳೇನು? ಎಂದು ವಿಧಾನಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಕಾರ್ಮಿಕ ಸಚಿವರಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ 2022-23ನೇ ಸಾಲಿನಲ್ಲಿ 9.61 ಲಕ್ಷ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಟ್ಟು ರೂ.249.00 ಲಕ್ಷಗಳನ್ನು ವಿನಿಯೋಗಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ..500.00 ಕೋಟಿಗಳನ್ನು ಮಂಡಳಿಯ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) (ಕರ್ನಾಟಕ) ನಿಯಮಗಳು 2006 ರ ನಿಯಮ 45 ರನ್ವಯ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ 1ನೇ ತರಗತಿಯಿಂದ ಸ್ನಾತಕ್ಕೋತರ ಪದವಿಯವರೆಗೆ ಧನಸಹಾಯವನ್ನು ನೀಡಲಾಗುವುದು. ಶೈಕ್ಷಣಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 2023-24ನೇ ಸಾಲಿಗೆ 2- ಆಡಳಿತ ಇಲಾಖೆಯ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್.ಎಸ್.ಪಿ) ಮೂಲಕ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿಗಳನ್ನು ಮಾರ್ಚ್ 2024 ರಲ್ಲಿ ಆಹ್ವಾನಿಸಲಾಗಿರುತ್ತದೆ. ಆದರೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಸದರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತದೆ. ಕಾರ್ಯವು ಈ ಹಿನ್ನೆಲೆಯಲ್ಲಿ, ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಕೊನೆಯ ದಿನಾಂಕವನ್ನು ದಿನಾಂಕ: 31-07-2024 ವಿಸ್ತರಿಸಲಾಗಿರುವುದರಿಂದ, ಶೈಕ್ಷಣಿಕ ಧನಸಹಾಯಕ್ಕೆ ಮೀಸಲಿರಿಸಿದ ಅನುದಾನವನ್ನು ವಿನಿಯೋಗಿಸಲು ರವರೆಗೆ ಸಾಧ್ಯವಾಗಿರುವುದಿಲ್ಲ ಎಂದರು.

Related posts

ಮೇ 19: ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಬೆಳ್ತಂಗಡಿ ಡಿ.ಕೆ. ಆರ್.ಡಿ.ಎಸ್ ನಿಂದ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ

Suddi Udaya

ವೇಣೂರು: ಆಟೋ ಚಾಲಕ ಅನಿಲ್ ಕುಮಾರ್ ನಿಧನ

Suddi Udaya

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚಳ

Suddi Udaya

ಬಿಜೆಪಿ ಬಜಿರೆ ಗ್ರಾಮದ ಬೂತ್ ಸಂಖ್ಯೆ 140 ರ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಕಾರ್ಯದರ್ಶಿಯಾಗಿ ಮೋನಪ್ಪ ಗೌಡ ಆಯ್ಕೆ

Suddi Udaya

ಕೊಕ್ಕಡ : ಮುಂಡೂರುಪಳಿಕೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!