32.6 C
ಪುತ್ತೂರು, ಬೆಳ್ತಂಗಡಿ
November 24, 2024
Uncategorized

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಗುರುಪೂರ್ಣಿಮಾ ಆಚರಣೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಉಜಿರೆ ಇಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ. ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಶಶಿಶೇಖರ್ ಎನ್ ಕಾಕತ್ಕರ್ ಮಾತನಾಡುತ್ತಾ ಶಿಷ್ಯರನ್ನು ಅಂಧಕಾರದಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ತರುವವನೇ ನಿಜವಾದ ಗುರು. ಗುರು ಅಥವಾ ಶಿಕ್ಷಕ ಎಂಬುದು ಅತ್ಯಂತ ಪವಿತ್ರವಾದ ವೃತ್ತ. ಗುರುವು ಪಠ್ಯದ ಜೊತೆಗೆ ಸ್ಥೈರ್ಯ, ಧೈರ್ಯ, ನಿಷ್ಠೆ, ಶ್ರದ್ಧೆ, ಸತ್ಯ, ಧರ್ಮಗಳ ಬೋಧನೆಯೊಂದಿಗೆ ಶಿಷ್ಯರ ಭವಿಷ್ಯದ ರೂವಾರಿಯಾಗಬೇಕು ಎಂದು ಗುರುಪೂರ್ಣಿಮಾದ ಮಹತ್ವವನ್ನು ತಿಳಿಸಿದರು.


ಭಾರತವು ಗುರುಪರಂಪರೆಯನ್ನು ಹೊಂದಿರುವ ರಾಷ್ಟ್ರ, ಗುರು ಎಂಬುವುದು ಅತ್ಯಂತ ಅರ್ಥಪೂರ್ಣ ವೃತ್ತಿ. ಗುರು ಎಂಬುವವನು ಶಿಕ್ಷಕರಿಗೆ ಅಥವಾ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಹಾಗಾದರೆ ಮಾತ್ರ ಗುರುಪೂರ್ಣಿಮೆ ದಿನವು ಅರ್ಥಪೂರ್ಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್ ಕೆ, ಅನುಷಾ ಡಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಹಾಗೂ ದ್ವಿತೀಯ ಬಿ.ಇಡಿ. ಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಆದ್ಯ ಅತಿಥಿಗಳನ್ನು ಪರಿಚಯಿಸಿ, ಪ್ರೀತಿ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಶೋರ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು

Suddi Udaya

ಸುಲ್ಕೇರಿ: ರಸ್ತೆಗೆ ಬೀಳುವ ಹಂತದಲ್ಲಿದ್ದ ಮರವನ್ನು ಕೂಡಲೇ ವೇಣೂರು ಅರಣ್ಯ ಅಧಿಕಾರಿಗಳ ಮುಖಾಂತರ ತೆರವು ಕಾರ್ಯ

Suddi Udaya

ಆಮಂತ್ರಣ ಪರಿವಾರದ ಸಾರಥ್ಯದಲ್ಲಿ ಸಾವಿರಾರು ಭಜಕರಿಂದ ಅಳದಂಗಡಿ ಅರಮನೆ ನಗರಿಯಲ್ಲಿ ಭಕ್ತಿಯ ಅಲೆ ಎಬ್ಬಿಸಿದ ಕುಣಿತಾ ಭಜನೆ

Suddi Udaya

ಪಟ್ರಮೆ: ಪಾದೆ ನಿವಾಸಿ ಶ್ರೀಮತಿ ಪುಷ್ಪವತಿ ನಿಧನ

Suddi Udaya

ಕೊಯ್ಯೂರು ಸ .ಹಿ ಪ್ರಾ. ಶಾಲೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya

ಕಂಪನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಏಳು ವಿದ್ಯಾರ್ಥಿಗಳು ತೇರ್ಗಡೆ

Suddi Udaya
error: Content is protected !!