April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆರಂಬೋಡಿ ದ.ಕ.ಜಿ.ಪಂ.ಉ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆ

ಆರಂಬೋಡಿ: ದ.ಕ.ಜಿ.ಪಂ.ಉ ಪ್ರಾಥಮಿಕ ಶಾಲೆ ಆರಂಬೋಡಿಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸ್ಮೃತಿ ರವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಪೋಷಕರು 18 ಜನ ಸದಸ್ಯರನ್ನು ಆಯ್ಕೆ ಮಾಡಿದರು. ಇವರಲ್ಲಿ ಅಧ್ಯಕ್ಷರಾಗಿ ಇಲ್ಯಾಸ್ ಅಬ್ದುಲ್ ಹಕೀಂ, ಉಪಾಧ್ಯಕ್ಷರಾಗಿ ಮೋಹನ್‌ದಾಸ್ ರವರನ್ನು ಆಯ್ಕೆ ಮಾಡಲಾಯಿತು.


ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ವಕೀಲರು ಶಿವಯ್ಯರವರು ಪೋಷಕರಿಗೆ ಕಾನೂನು ಮಾಹಿತಿಗಳನ್ನು ತಿಳಿಸುವುದರೊಂದಿಗೆ, ಆಯ್ಕೆಗೊಂಡ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶುಭಕೋರಿದರು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರು ಸುಜಾತ, ಮಾಜಿ ಎಸ್.ಡಿ.ಎಂಸಿ ಅಧ್ಯಕ್ಷೆ ಯಶವಂತಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ ಸ್ವಾಗತಿಸಿ, ಸಹ ಶಿಕ್ಷಕಿ ವಿಜಯಲಕ್ಷ್ಮಿ ಧನ್ಯವಾದವಿತ್ತರು.

Related posts

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರ್ ಸರ್ಕಲ್ : ಪ್ರಜಾಭಾರತ ಸಂಗಮ

Suddi Udaya

ಮಡಂತ್ಯಾರು: ಬಸವನಗುಡಿ ಒಕ್ಕೂಟದ ವತಿಯಿಂದ ಗ್ರಾಮ ಸುಭಿಕ್ಷೆ

Suddi Udaya

ಮಹಾಕುಂಭ ಮೇಳದಲ್ಲಿ ಗರ್ಡಾಡಿ, ನಿಟ್ಟಡೆ ಪಡಂಗಡಿ ಶಕ್ತಿ ಕೇಂದ್ರದ ಪ್ರಮುಖ್ ರಿಂದ ಪುಣ್ಯಸ್ನಾನ

Suddi Udaya

ಚಾರ್ಮಾಡಿ: ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ  ಕೃಷಿ ನಾಶ

Suddi Udaya

ಡಿ.12ರಂದು ಬೆಳ್ತಂಗಡಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!