ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನಲ್ಲಿರುವ ಎಂಐಯು ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ರೋಗಿಗಳಿಗೆ ನೇರವಾಗಿ ದಾಖಲಾತಿಗೆ ಅವಕಾಶ ಮಾಡಿಕೊಡಬೇಕು ಸದನದಲ್ಲಿ :ಶಾಸಕಹರೀಶ್ ಪೂಂಜಾ

Suddi Udaya

ಬೆಳ್ತಂಗಡಿ: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಮಂಗಳೂರಿನಲ್ಲಿರುವ ಎಂಐಯು ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ರೋಗಿಗಳಿಗೆ ನೇರವಾಗಿ ದಾಖಲಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದ್ದಾರೆ.
ಕೇರಳ ರಾಜ್ಯದಿಂದ ಬಂದವರಿಗೆ ಇಲ್ಲಿ ನೇರವಾಗಿ ದಾಖಲಾತಿಗೆ ಅವಕಾಶ ಇದೆ. ಆದರೆ ನಮ್ಮ ರಾಜ್ಯದಿಂದ ಬಂದವರು ಚಿಕಿತ್ಸೆ ಪಡೆಯಬೇಕಾದರೆ ಜಿಲ್ಲಾ ಆಸ್ಪತ್ರೆಯಿಂದ ರೆಪೇರಲ್ ಲೇಟರ್ ತಂದು ಆ ನಂತರ ಎಡ್ಮೀಷನ್ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಮ್ಮ ರಾಜ್ಯದ ಮತ್ತು ನಮ್ಮ ಜಿಲ್ಲೆಯ ಕ್ಯಾನ್ಸರ್ ರೋಗಿಗಳಿಗೂ ನೇರ ದಾಖಲಾತಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ವಿನಂತಿಸಿದರು. ಅಲ್ಲದೆ ೨೦೨೨ರ ಕೇಂದ್ರದ ಪರಿಷ್ಕೃತ ದರ ಪಟ್ಟಿಯನ್ನು ಎಲ್ಲಾ ರಾಜ್ಯದಲ್ಲೂ ಅಂಗೀಕೃತವಾಗಿವಾಗಿ ಜಾರಿಯಾಗಿದೆ. ನಮ್ಮ ರಾಜ್ಯದಲ್ಲೂ ಕೇಂದ್ರದ ಪರಿಷ್ಕೃತ ಪಟ್ಟಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

Leave a Comment

error: Content is protected !!