April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಪ್ರಸಿದ್ದ ಪುಣ್ಯಕ್ಷೇತ್ರ ಶಿರ್ಡಿ ಸಾಯಿಬಾಬಾ ಕ್ಷೇತ್ರಕ್ಕೆ ತೀರ್ಥಯಾತ್ರೆ ಕೈಗೊಂಡ ಬೆಳ್ತಂಗಡಿಯ ನೂರಾರು ಭಕ್ತರು

ಬೆಳ್ತಂಗಡಿ: ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳೊಂದಾದ ಶಿರ್ಡಿ ಶ್ರೀ ಸಾಯಿ ಬಾಬಾ ಕ್ಷೇತ್ರಕ್ಕೆ ಬೆಳ್ತಂಗಡಿಯಿಂದ ಸುಮಾರು 106 ಯಾತ್ರಾರ್ಥಿಗಳು ಆಗಮಿಸಿ ಗುರುವಿನ‌ ದರ್ಶನ‌ ಪಡೆದರು.

ಜುಲೈ 20ರಂದು ಬಳಂಜ ಮಜ್ಜೇನಿಬೈಲು ಅನಂತರಾಮ ಹೊಳ್ಳರವರ ನೇತೃತ್ವದಲ್ಲಿ ಬಳಂಜ, ಬೆಳ್ತಂಗಡಿ, ಕೊಕ್ರಾಡಿ, ಉಜಿರೆ ಹಾಗೂ ನಾನಾ ಕಡೆಗಳಿಂದ ನೂರಾರು ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾದರು

ಶಿರ್ಡಿ ಸಾಯಿಬಾಬಾ ಮಂದಿರ ದರ್ಶನ, ನಾಸಿಕ, ಪಂಚವಟಿ, ಎಲ್ಲೋರ, ಹನುಮಾನ್ ದೇವಾಲಯ, ಜ್ಯೋತಿರ್ಲಿಂಗ ದರ್ಶನ, ಶನಿಶಿಂಗಣಾಪುರ ಕ್ಷೇತ್ರ ದರ್ಶನ, ತ್ರಯೆಂಭೇಕೇಶ್ವರ ಜೋತಿರ್ಲಿಂಗ ದರ್ಶನ ಮಾಡಲಾಯಿತು.

ಶಿರ್ಡಿ ಸಾಯಿಬಾಬಾ ಮಂದಿರದ ಕೇಂದ್ರ ಭಾಗದಲ್ಲಿ ಸಾಯಿಬಾಬಾ ಸಮಾಧಿ ಮಂದಿರವಿದೆ. ಬೆಳಿಗ್ಗೆ 4ಕ್ಕೆ ತೆರೆಯುವ ಈ ಮಂದಿರ ರಾತ್ರಿ 11ಕ್ಕೆ ಮುಚ್ಚಲ್ಪಡುತ್ತದೆ. ಇದೇ ಮಂದಿರದ ಸನಿಹದಲ್ಲಿ ಬಾಬಾ ಅವರು ನೆಲೆಸಿದ್ದ ದ್ವಾರಕಾಮಾಯಿ ಮಸೀದಿ, ಬಾಬಾ ಅವರ ಚಾವಡಿ (ನ್ಯಾಯ ನಿರ್ಣಯ ಸ್ಥಳ), ಗಣೇಶ, ಆಂಜನೇಯನ ಗುಡಿಗಳೂ ಇದೆ. ಸಾಯಿ ಮಂದಿರಕ್ಕೆ ತೆರಳಿದವರು ಈ ಎಲ್ಲಾ ಸ್ಥಳಕ್ಕೂ ಭೇಟಿ ನೀಡುತ್ತಾರೆ. ದೇವಾಲಯದ ಆವರಣದಲ್ಲಿ ಸಾಯಿಬಾಬಾ ಜೀವನದ ಪ್ರಮುಖ ಘಟ್ಟಗಳಲ್ಲಿ ತೆಗೆಯಲಾದ ಛಾಯಾಚಿತ್ರಗಳಿರುವ ವಸ್ತು ಸಂಗ್ರಹಾಲವೂ ಇದೆ.
ವಿಶೇಷವೆಂದರೆ ಪ್ರಸಿದ್ದ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ನಾನಾ ದೇವಾಲಯದಲ್ಲಿರುವಂತೆಯೇ ಇಲ್ಲಿಯೂ ಜನಸಂದಣಿ ಅಧಿಕವಾಗಿದ್ದು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕಾಗಿದೆ.

ಸುಮಾರು 700 ವರ್ಷಗಳಷ್ಟು ಹಳೆಯ ದೇವಾಲಯವಾದ ತ್ರಯಂಬಕೇಶ್ವರ ದೇವಾಲಯಕ್ಕೆ ಭೇಟಿ ನೀಡಲಾಯಿತು. ಭಾರತದಲ್ಲಿ ಪ್ರಖ್ಯಾತವಾದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ 10ನೇ ಜ್ಯೋತಿರ್ಲಿಂಗವಾಗಿದೆ. ವಿಶೇಷವೆಂದರೆ ಇಲ್ಲಿ ಮೂರು ಚಿಕ್ಕ ಚಿಕ್ಕ ಶಿವಲಿಂಗಗಳಿದ್ದು ಇದನ್ನು ಬ್ರಹ್ಮ,, ವಿಷ್ಣು ಹಾಗೂ ಮಹೇಶ್ವರ ರೂಪ ಎನ್ನಲಾಗುತ್ತದೆ.

ತೀರ್ಥ ಯಾತ್ರೆಯಲ್ಲಿ ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ನಿರ್ದೇಶಕ ವಿಶ್ವನಾಥ ಹೊಳ್ಳ, ಗುರುಪ್ರಸಾದ್ ಹೆಗ್ಡೆ, ಪತ್ರಕರ್ತರಾದ ಮನೋಹರ್ ಬಳಂಜ, ದೀಪಕ್ ಅಠವಳೆ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ, ಪತ್ರಕರ್ತ ಸಂತೋಷ್ ಪಿ ಕೋಟ್ಯಾನ್ ಬಳಂಜ, ಪ್ರಮುಖರಾದ ಪ್ರವೀಣ್ ಕುಮಾರ್ ಹೆಚ್‌.ಎಸ್, ಶೇಖರ್ ಶೆಟ್ಟಿ, ಚಿದಾನಂದ ಇಡ್ಯ ಬೆಳ್ತಂಗಡಿ, ಪ್ರಮೋದ್ ಕಾಮತ್, ಸದಾನಂದ ಸಾಲಿಯಾನ್ ಬಳಂಜ, ಗಣೇಶ್ ಮರೋಡಿ, ಯತೀಶ್ ವೈ.ಎಲ್, ರೂಪಾನಾಥ್ ವೈ.ಎಲ್, ದಿನೇಶ್ ಪೂಜಾರಿ ಅಂತರ, ದಿನೇಶ್ ಕೋಟ್ಯಾನ್ ಕುದ್ರೋಟ್ಟು, ದುಗ್ಗಯ ಪೂಜಾರಿ ಹುಂಬೆಜೆ, ಪ್ರವೀಣ್ ಪೂಜಾರಿ ಲಾಂತ್ಯಾರು, ಜನಾರ್ಧನ ಪೂಜಾರಿ, ಕೃಷ್ಣ ಭಟ್ ಕೊಕ್ರಾಡಿ, ಸಂಜೀವ ಶೆಟ್ಟಿ ನಾಲ್ಕೂರು, ಸನತ್ ಶೆಟ್ಟಿ ನಾಲ್ಕೂರು, ರಂಜಿತ್ ಪೂಜಾರಿ, ಲತೇಶ್ ಪೆರಾಜೆ, ಗಣೇಶ್ ಮರೋಡಿ, ಬಳಂಜ ವಾಲಿಬಾಲ್ ಕ್ಲಬ್ ಸದಸ್ಯರು, ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಗೆ ದೇಣಿಗೆ ಹಸ್ತಾಂತರ

Suddi Udaya

ಬಜಿರೆಯಲ್ಲಿ ಎರಡು ಕುಟುಂಬಗಳ ನಡುವೆ ಜಾಗದ ಪಾಲಿನ ವಿಷಯದಲ್ಲಿ ಹೊಡೆದಾಟ: ಪರಸ್ಪರ ಆರೋಪಿಸಿ ಪೊಲೀಸರಿಗೆ ದೂರು

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya

ಎಸ್ ಎಸ್ ಎಲ್ ಸಿ ಸಾಧಕ, ರಾಜ್ಯಕ್ಕೆ ದ್ವೀತಿಯ ಸ್ಥಾನಿ ಚಿನ್ಮಯ್ ಗೆ ಮುಳಿಯ ಜ್ಯುವೆಲ್ಲರ್ಸ್ ನಿಂದ ಸನ್ಮಾನ

Suddi Udaya

ಅನಾರು ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.340 ಕೋಟಿ ವ್ಯವಹಾರ, ರೂ. 71 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 21% ಡಿವಿಡೆಂಡ್ ಸುಮಾರು 37 ವರ್ಷ ಸೇವೆ ಸಲ್ಲಿಸಿದ ಮಹೇಂದ್ರವರ್ಮರಿಗೆ ಬೀಳ್ಕೊಡುಗೆ

Suddi Udaya
error: Content is protected !!