April 2, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ಮರದ ಗೆಲ್ಲು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮವಾಗಿ ಚಲಿಸುತ್ತಿದ್ದ ಲಾರಿ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು. ಈ ವೇಳೆ ರಸ್ತೆಗೆ ವಿದ್ಯುತ್ ತಂತಿಯಿಂದ ಚಲಿಸುತ್ತಿದ್ದ ಬೈಕ್ ಸವಾರರಿಬ್ಬರು ಸ್ಕೀಡ್ ಅಗಿ ಬಿದ್ದಿದ್ದು. ಘಟನೆ ವೇಳೆ ಬೈಕ್ ಸವಾರರಿಬ್ಬರು ಮತ್ತು ಲಾರಿ ಚಾಲಕ ಪ್ರಾಣಾಪಾಯದಿಂದ ಬದುಕಿಳಿದಿರುವ ಘಟನೆ ಗುರುವಾಯನಕೆರೆ ವರಕಬೆಯಲ್ಲಿ ನಡೆದಿದೆ.

ಕುವೆಟ್ಟು ಗ್ರಾಮದ ವರಕಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜು.24 ರಂದು (ಇಂದು) ಬೆಳಗ್ಗೆ ಮದಡ್ಕ‌‌ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಲಾರಿ ಮೇಲೆ ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ.

ವಿದ್ಯುತ್ ತಂತಿ ಮೇಲೆ ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬ ಲಾರಿ ಮೇಲೆ ಬೀಳುವ ವೇಳೆ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದರಿಂದ ಎರಡು ಬೈಕ್ ಸವಾರರು ಸ್ಕೀಡ್ ಅಗಿ ರಸ್ತೆಗೆ ಬಿದ್ದಿದ್ದು. ಘಟನೆಯಲ್ಲಿ ಬೈಕ್ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಲಾರಿ ಮೇಲೆ ವಿದ್ಯುತ್‌ ಕಂಬ ಬಿದ್ದಿದ್ದರಿಂದ ಒಂದು ಗಂಟೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯ ವೇಳೆ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಆಫ್ ಅಗಿದ್ದರಿಂದ ಲಾರಿ ಚಾಲಕ ಹಾಗೂ ಇಬ್ಬರು ಬೈಕ್ ಸವಾರರು ಅದೃಷ್ಟವಶಾತ್ ಪಾರಾಗಿದ್ದಾರೆ.

Related posts

ಚಾಂದ್ರಮಾನ ಯುಗಾದಿಯಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಕೃಷಿ ಇಲಾಖೆಯಲ್ಲಿ ಜಲಾನಯನ ಪ್ರದೇಶದ ರೈತರಿಗೆ ಕೈಗಾಡಿ, ಪವರ್ ವಿಹಾರ್ ಯಂತ್ರೋಪಕರಣ ವಿತರಣೆ

Suddi Udaya

ಸೆ.12: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಮಹಿಳೆಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ಸುಮಾರು ರೂ. 12.90 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya

ಸುಲ್ಕೇರಿಮೊಗ್ರು ಹೊಸಮನೆ ನಿವಾಸಿ ನೀಲಮ್ಮ ನಿಧನ

Suddi Udaya
error: Content is protected !!