ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಹೃದಯ ಭಾಗದಲ್ಲಿರುವ ಸಾರ್ವಜನಿಕರ ಬಸ್ಸು ತಂಗುದಾನದಲ್ಲಿ ನಿಲ್ಲಿಸದೆ ಅನಗತ್ಯವಾದ ಜಾಗದಲ್ಲಿ ನಿಲ್ಲಿಸಿ ಮಕ್ಕಳನ್ನು ಬಿಟ್ಟು ಹೋದ ಘಟನೆ ಜು.24 ರಂದು ಬೆಳಿಗ್ಗೆ ನಡೆಯಿತು.
ಬಸ್ಸು ಹತ್ತಲು ಪರದಾಡಿ ಕೊಂಡು ಮಳೆಯಲ್ಲಿ ಒದ್ದೆಯಾಗಿ ಕೆಸರು ನೀರಲ್ಲೇ ಬಸ್ಸಿನ ಹಿಂದೆ ಓಡಿ ಕೊಂಡು ಹೋಗುವಂತ್ತಾಗಿದೆ. ಅದರೂ ಪ್ರಯಾಣಿಕರು ಇಳಿಸಿ, ಮಕ್ಕಳನ್ನು ಹತ್ತಿಸದೆ ಬಸ್ ಮುಂದುವರಿಯುತ್ತದೆ. ಶಾಲಾ ಮಕ್ಕಳು ಹಿಂದಿರುಗಿ ಮುಖ ಚಪ್ಪೆ ಮಾಡಿ, ಕೆಲವರ ಕಣ್ಣಲ್ಲಿ ನೀರು ಬರುವುದನ್ನು ಕಂಡು ನಮ್ಮ ಮನಸ್ಸು ಕರಗುತ್ತದೆ. ಖಾಸಗಿ ಬಸ್ ಹತ್ತಲು ಪರದಾಟ ಪಡುತ್ತಾರೆ. ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಕರು ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ.
ಗೇರುಕಟ್ಟೆಯ ಮೂಲಕ ನೂರಾರು ವಿಧ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ, ಸಾರ್ವಜನಿಕರು ಸರಕಾರಿ ಕಚೇರಿಯಲ್ಲಿ ಕೆಲಸದ ನಿಮಿತ್ತ ಹಾಗೂ ಅನಾರೋಗ್ಯ ಪೀಡಿತರು, ವ್ರದ್ದರು ಬೆಳ್ತಂಗಡಿಗೆ ಹೋಗಲು ಕಷ್ಟಕರವಾಗಿದೆ.
ಈಗಾಗಲೇ ಎಲ್ಲಾ ಸರಕಾರಿ ಬಸ್ ಗೇರುಕಟ್ಟೆಯಲ್ಲಿ ನಿಲುಗಡೆಗೆ ಪಂಚಾಯತು ಅನುಮೋದನೆ ದೊರಕಿದೆ. ಅದರೂ ಕೆಲವೊಂದು ಸರಕಾರಿ ಬಸ್ ನಿಲುಗಡೆ ಇರುವುದಿಲ್ಲ.
ಕರ್ನಾಟಕ ರಾಜ್ಯ ರಸ್ತೆ ಸರಕಾರಿ ಬಸ್ಸು ನಿಗಮದವರು ಶಾಲಾ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಜೊತೆ ಚೆಲ್ಲಾಟ ತೋರಿಸುವ ಬದಲಿಗೆ ಮಾನವೀಯತೆ ಮೆರೆದು ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸ ಬೇಕು ಎಂದು ಸಾರ್ವಜನಿಕರ ಒತ್ತಾಯ ಆಗಿದೆ.
ವರದಿ: ಕೆ.ಎನ್ ಗೌಡ