24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ : ಜಿ.ಎ.ಎಸ್. ಕಂಬದಲ್ಲಿ ಢಮರ್ ಶಬ್ದ

ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಯ,ನ್ಯಾಯತರ್ಪು ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಆಗುತ್ತಿದೆ. ಜಿ.ಎ.ಎಸ್.ಕಂಬದಲ್ಲಿ ಢಮರ್ ಎಂಬ ದೊಡ್ಡ ಗಾತ್ರದ ಶಬ್ದ. ಜು.26 ರಂದು ಆಗಾಗ ಕೇಳಿಸುವಾಗ ಸಾರ್ವಜನಿಕರನ್ನೂ ಬೆಚ್ಚಿ ಬೀಳಿಸುಂತಿದೆ. ಮತ್ತು ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಇದೆ ಭಾವಿಸಲಾಗುತ್ತದೆ.


ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವುದು ಸರ್ವೇಸಾಮಾನ್ಯವಾಗಿದೆ. ಅದರೆ ಇಲ್ಲಿಯ ಸಮಸ್ಯೆಗಳು ಹಲವಾರು ಇದೆ. ಕಳೆದ ವರ್ಷದಿಂದ ಈ ತನಕ ಕೆಲವೊಂದು ಕಡೆಗಳಲ್ಲಿ ವಿದ್ಯುತ್ ಕಂಬಕ್ಕೆ ಮತ್ತು ತಂತಿಗಳಿಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ತರೆವುಗೊಳಿಸದೆ ಮತ್ತು ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಜಾವಬ್ದಾರಿ ಎದ್ದು ಕಾಣುತ್ತದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಗೇರುಕಟ್ಟೆ ಮಂಜಲಡ್ಕ ಕ್ರಾಸ್ ರಸ್ತೆಯ ಪಕ್ಕದಲ್ಲಿ ಅಂಗಾರಬೆಟ್ಟು ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದ ತಂತಿಗಳಿಗೆ ಅಳವಡಿಸಿದ ಗ್ಲಾಸು ಮುರಿದು 3-4 ತಿಂಗಳ ಹಿಂದೆ ಆಗಿದೆ. ಕಂಬದಿಂದ ತಂತಿ ಬೇರ್ಪಟ್ಟ ಸುಮಾರು 6 ರಿಂದ 8 ಅಡಿ ದೂರ ಸರಿದು ಸದ್ಯ ಪಕ್ಕದಲ್ಲಿರುವ ಮರದ ಕೊಂಬೆಗಳ ಅಧಾರದಲ್ಲಿ ನಿಂತಿರುತ್ತದೆ. ಹಾಗೂ ಅದರಲ್ಲಿ ವಿದ್ಯುತ್ ಸಂಚಾರವಿರುವುದನ್ನು ಗಮನಿಸಿದಾಗ ಮೈ ಝಮೇನಿಸುತ್ತದೆ.ಶಾಲಾ ಮಕ್ಕಳು, ಕೃಷಿಕರು ಇದೇ ರಸ್ತೆಯಲ್ಲಿ ಓಡಾಡುವುದು ಅನಿವಾರ್ಯವಾಗಿದೆ.
ಈ ಬಗ್ಗೆ ಸ್ಥಳೀಯರು ಸಿಬ್ಬಂದಿಗಳಿಗೆ ತಿಳಿಸಿದರು ಕ್ಯಾರೆ ಮಾಡುವುದಿಲ್ಲ.ಜೀವ ಬಲಿಪಡೆದ ನಂತರದಲ್ಲಿ ಸರಿಪಡಿಸುವ ಮನೋಭಾವನೆ ಇರಬಹುದಾ..?


ಪರಪ್ಪು- ಕೊಯ್ಯೂರು ಕ್ರಾಸ್ ಬಟ್ಟೆಮಾರು ರಸ್ತೆಯ ಪಕ್ಕದಲ್ಲಿ ಟ್ರಾನ್ಸ್ ಫಾರ್ಮ್ ಪೆಟ್ಟಿಗೆ ಯಿಂದ ಹಾದು ಹೋಗುವ ಎಲ್ಲಾ ತಂತಿಗಳು ಪಕ್ಕದ ಮರ,ಬಳ್ಳಿಗಳ ಆಶ್ರಯ ಪಡೆದು ಕೊಂಡಿದೆ.ಅದರಲ್ಲಿ ಆಗಾಗ ಬೆಂಕಿ ಕಾಣಿಸಿಕೊಂಡಾಗ ಭಯವಾಗುತ್ತದೆ ಎಂದು ಪಕ್ಕದ ಮನೆಯವರು ಹಾಗೂ ಸಾರ್ವಜನಿಕ ಹೇಳುತ್ತಾರೆ..ಕೆಲವೇ ತಿಂಗಳ ಹಿಂದೆ ಬೈಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ನೆನೆಪು ಇನ್ನೂ ಮಾಸಿಲ್ಲ. ಮೆಸ್ಕಾಂ ಇಲಾಖೆಯವರು ಸಾರ್ವಜನಿಕರೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸುತ್ತಾರೆ.ತಪ್ಪಿದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ,ಶಾಸಕರ ಹಾಗೂ ಸಂಸದರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ ಎಚ್ಚರಿಸಿದ್ದಾರೆ.


ಈ ಹಿಂದೆ ಪತ್ರಿಕೆ, ವೆಬ್ ಸೈಟ್ ಗಳಲ್ಲಿ ವರದಿ ಪ್ರಕಟವಾದ ನಂತರದಲ್ಲಿ ಕಾಟಾಚಾರಕ್ಕೆ ಸ್ವಲ್ಪಮಟ್ಟಿಗೆ ಕೃಷಿಕರ ಮತ್ತು ಸಾರ್ವಜನಿಕರ ಸಹಾಯದಿಂದ ಮರದ ಕೊಂಬೆ ತೆರವು ಕೆಲಸ ಆಗಿದೆ.
ವರದಿ: ಕೆ.ಎನ್ ಗೌಡ

Related posts

ಸೆ.25 ರಿಂದ ಬೆಳ್ತಂಗಡಿ ಜೈನ್ ಮೊಬೈಲ್ ಹಾಗೂ ನ್ಯೂ ಜೈನ್ ಮೊಬೈಲ್ ನಲ್ಲಿ ಹಬ್ಬದ ಆಫರ್ : ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ

Suddi Udaya

ಬೆಳ್ತಂಗಡಿ: ಹೊತ್ತಿ ಉರಿದ ಬೈಕ್ : ವಾರೀಸುದಾರು  ಹಾಗೂ ನಂಬರ್  ಪ್ಲೇಟ್  ಇಲ್ಲದ ಬೈಕ್ ಮೇಲೆ ಅನುಮಾನ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಆ. 27: ಬೆಳ್ತಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆ ಹಾಗೂ ನೂತನ ಲಿಪ್ಟ್ ಉದ್ಘಾಟನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಅಧ್ಯಕ್ಷರಾಗಿ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ಆಯ್ಕೆ

Suddi Udaya

ಪುತ್ತೂರು ಗೇರು ಸಂಶೋಧನ ಕೇಂದ್ರದ ಎರಡು ತಳಿ ಪ್ರಧಾನಿಯಿಂದ ಬಿಡುಗಡೆ

Suddi Udaya
error: Content is protected !!