April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಡಿಜಿಟಲ್ ಸಾಕ್ಷರತಾ ಕಾರ್ಯಾಗಾರ

ಮುಂಡಾಜೆ ಪದವಿಪೂರ್ವ ಕಾಲೇಜು ಮುಂಡಾಜೆ ಇಲ್ಲಿನ ಮಹಿಳಾ ಕೋಶ ಹಾಗೂ ಡಿಜಿಟಲ್ ಸಾಕ್ಷರತಾ ಕ್ಲಬ್ ನ ವತಿಯಿಂದ ನಡೆದ ಡಿಜಿಟಲ್ ಸಾಕ್ಷರತಾ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾಲೇಜಿನ ಉಪನ್ಯಾಸಕರಾದ ಕೃಷ್ಣ ಕಿರಣ್ ಕೆ. ಡಿಜಿಟಲೀಕರಣ ವ್ಯವಸ್ಥೆಯ ಬಳಕೆ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಾಲಿ ಒ.ಎ. ಇವರು ಮಾತನಾಡಿ ಕಂಪ್ಯೂಟರ್ ಸಾಕ್ಷರತಾ ವಿಷಯಗಳ ಬಗ್ಗೆ ಎಲ್ಲರೂ ತಿಳಿದಿರಬೇಕು, ಇದು ಇಂದಿನ ಆಧುನಿಕ ಯುಗಕ್ಕೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಮಹಿಳಾ ಕೋಶದ ಮುಖ್ಯಸ್ಥೆ ಹಾಗೂ ಇತಿಹಾಸ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಇವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ವಸಂತಿ ಇವರು ಎಲ್ಲರನ್ನೂ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ಧನ್ಯ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಕುಮಾರಿ ಛಾಯಾ ಧನ್ಯವಾದಗೈದರು.

Related posts

ಉಜಿರೆ: ನೆನಪಿನ ಅಂಗಳ ಕಾರ್ಯಕ್ರಮದಲ್ಲಿ ಮನೋರಮ ಭಟ್ ರವರಿಗೆ ಸನ್ಮಾನ

Suddi Udaya

ಬಿಜೆಪಿ ದ.ಕ. ಜಿಲ್ಲೆಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠ ಜಿಲ್ಲಾ ಸಮಿತಿಗೆ ಸದಸ್ಯರಾಗಿ ಸುಪ್ರೀತ್ ಜೈನ್ ಅಳದಂಗಡಿ

Suddi Udaya

ಬೆಳಾಲು: ಹೈ ಟೆನ್ಶನ್ ವಿದ್ಯುತ್ ತಂತಿಗೆ ಅಲ್ಯುಮೀನಿಯಂ ಏಣಿ ತಗುಲಿ ವ್ಯಕ್ತಿ ಸಾವು

Suddi Udaya

ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬ ಸಂಭ್ರಮ:

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಹೊಕ್ಕಾಡಿಗೋಳಿ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!