37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ನಾಳೆ (ಜು.28) ಕುಲಾಲ ಮಂದಿರದಲ್ಲಿನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಮತ್ತು ಕುಲಾಲ, ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟಿದ ಕೂಟ ಕಾರ್ಯಕ್ರಮ ಜು.28 ರಂದು ಕುಲಾಲ ಮಂದಿರ ಗುರುವಾಯನಕೆರೆಯಲ್ಲಿ ಜರುಗಲಿದೆ.

ಜು. 21ರಂದು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯಲ್ಲಿ
ಈ ನಿಧಾ೯ರವನ್ನು ಕೈಗೊಳ್ಳಲಾಯಿತು. ಅಧ್ಯಕ್ಷತೆಯನ್ನು
ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಇವರು ವಹಿಸಿದ್ದರು.
ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲ್ ಸ್ವಾಗತಿಸಿ ಹಿಂದಿನ ಸಭೆಯ ನಡವಳಿ ಓದಿ ಮಂದಿಸಿದರು. ಜು.28.ರ ಆದಿತ್ಯವಾರ ರಂದು ಶಾಸಕರಾದ ಹರೀಶ್ ಪೂಂಜಾ ಇವರ ಉಪಸ್ಥಿತಿಯಲ್ಲಿ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರನ್ನು ಅಭಿನಂದಿಸುವುದು ಮತ್ತು ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಯಲ್ಲಿ ಡಿಸ್ಟಿಂಕ್ಷನ್ (ಶೇಕಡಾ 85.00% ಮತ್ತು ಅಧಿಕ ಅಂಕ) ಪಡೆದ ಸ್ವಜಾತಿ ವಿದ್ಯಾರ್ಥಿಗಳನ್ನು ಗೌರವಿಸುವುದು* ಹಾಗೂ ಆಟಿಡೊಂಜಿ ಕೂಟ* ಕಾರ್ಯಕ್ರಮ ನಡೆಸುವುದು ಎಂದು. ತೀರ್ಮಾನಿಸಲಾಯಿತು.

ನಮ್ಮ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಲಾಯಿತು. ಸಭೆಯಲ್ಲಿ ಲೋಕೇಶ್ ಕುಲಾಲ್ ಕಂಚಿಂಜ, ಜಗನ್ನಾಥ್ ಸಿರಿಮಜಲ್, ತಿಲಕ್ ರಾಜ್ ಕುಲಾಲ್ ಕಂಚಿಂಜ, ಹರೀಶ್ ಮೂಲ್ಯ ನಾರಾವಿ, ಪ್ರವೀಣ್ ಕುಲಾಲ್ ಬರಾಯ, ಮೋಹನ್ ಕುಲಾಲ್ ಕಂಚಿಂಜ, ಹರಿಶ್ಚಂದ್ರ ಕುಲಾಲ್ ಪಾಂಡೇಶ್ವರ, ಸಂಜೀವ ಕುಲಾಲ್ ಬೆಳ್ತಂಗಡಿ, ಗಣೇಶ್ ಕುಲಾಲ್ ಗುರುವಾಯನಕೆರೆ, ದಯಾನಂದ ಕುಲಾಲ್ ಅಂಡಿಂಜೆ, ಸಂಘದ ಮೆನೇಜರ್ ಮುಖೇಶ್ ಕುಲಾಲ್ ಉಪಸ್ಥಿತರಿದ್ದರು.

Related posts

ಸರ್ವೋದಯ ಪಕ್ಷದಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು :ಆದಿತ್ಯ ನಾರಾಯಣ್

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಉಜಿರೆ: ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್‌ ಕುಂಞಿ ನಿಧನ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ದಿನಾಚರಣೆ : ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಮಾಜಿ ರಾಷ್ಟ್ರ ಪತಿ ಮೊಮ್ಮಗ ಇಂದ್ರಜಿತ್ ಸಿಂಗ್ ಭೇಟಿ

Suddi Udaya

ಮೊಗ್ರು: ಯುವ ಕೃಷಿಕ ದೇವಿಪ್ರಸಾದ್ ಗೌಡ ಕಡಮ್ಮಾಜೆ ರವರಿಗೆ “ಉತ್ತಮ ಅಡಿಕೆ ಕೃಷಿಕ ಪ್ರಶಸ್ತಿ”

Suddi Udaya
error: Content is protected !!