38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮಾಲಾಡಿ ಸೋಣಂದೂರಿನಲ್ಲಿ ಗಾಳಿ ಮಳೆಗೆ ಮನೆ, ಕೃಷಿಗೆ ತೀವ್ರ ತರಹದ ಹಾನಿ: ಕೋಟ್ಯಾಂತರ ರೂ. ನಷ್ಟಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್‌ರವರ ನೇತೃತ್ವದಲ್ಲಿ ಕಾರ್ಯಾಚರಣೆ

ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ಜು.೨೬ರಂದು ಮಾಲಾಡಿ ಸೋಣಂದೂರಿನಲ್ಲಿ ತನ್ನ ಪ್ರತಾಪವನ್ನು ತೋರಿಸಿದ್ದು ವ್ಯಾಪಕ ಹಾನಿಗೆ ಕಾರಣವಾಗಿದೆ.

ಮಾಲಾಡಿಯ ಶಾಂತಿಧಾಮ ಆಶ್ರಮಕ್ಕೆ ಸಂಪೂರ್ಣವಾಗಿ ಹಾನಿಯಾಗಿದ್ದು, ಗಾಳಿಯ ಅಬ್ಬರಕ್ಕೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ.

ಮಾಲಾಡಿ, ಸೋಣಂದೂರಿನಲ್ಲಿ ಭಾರೀ ಗಾಳಿಗೆ ಸುಮಾರು ೧೧ ಮನೆಗಳಿಗೆ ತೀವ್ರತರಹದ ಹಾನಿಗಳಾಗಿದೆ. ಭಾರೀಗಾತ್ರದ ಮರಗಳು ನೆಲಕ್ಕೆ ಉರುಳಿದೆ. ಈ ಪರಿಸರದಲ್ಲಿ ಕೃಷಿಗೆ ವ್ಯಾಪಕ ಹಾನಿಯಾಗಿದ್ದು ಅಡಿಕೆ ಮರಗಳು ಮುರಿದು ಬಿದ್ದಿದೆ, ಕೃಷಿ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿಗಳು ತಿಳಿದು ಬರಬೇಕಾಗಿದೆ.

ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಕೋಟ್ಯಾಂತರ ರೂ ಹಾನಿ ಸಂಭವಿಸಿದೆ.
ಮಾಲಾಡಿ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್‌ರವರ ನೇತೃತ್ವದಲ್ಲಿ ಗ್ರಾಮಸ್ಥರು ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ನೆರವು ಕಾರ್ಯಾಚರಣೆ ನಡೆಸಲಾಗಿದ್ದು ಮರಗಳನ್ನು ತೆರವುಗೊಳಿಸಲಾಗಿದೆ.

ಹಾನಿಗೆ ಈಡಾದ ಪ್ರದೇಶಗಳಿಗೆ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಅಧ್ಯಕ್ಷ ಬೇಬಿ ಸುವರ್ಣ, ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ, ಗ್ರಾಮ ಸಹಾಯಕ ಎಂ. ಗುಣಕರ ಹೆಗ್ಡೆ, ಗ್ರಾ.ಪಂ ಸದಸ್ಯ ಉಮೇಶ್, ಮೆಸ್ಕಾಂ ಜೆಇ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಪಡಂಗಡಿ: ಅರುಣ್ ಡಿಸೋಜ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರೂ.2 ಕೋಟಿ ಗೋಲ್ಮಾಲ್ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

Suddi Udaya

ವೇಣೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಯುವವಾಹಿನಿ ಘಟಕದಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ

Suddi Udaya

ಎಲೆಚುಕ್ಕಿ ರೋಗದಿಂದ ರೈತರು ಹೈರಾಣಾಗಿದ್ದಾರೆ-ವಿಧಾನ ಪರಿಷತ್ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಬೊಟ್ಯಾಡಿ

Suddi Udaya

ಶಿಬಾಜೆ: ಬರ್ಗುಳದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ

Suddi Udaya

ಆ.17: ಬೆಳ್ತಂಗಡಿ ಲಯನ್ಸ್‌ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya
error: Content is protected !!