25.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಲೇಡಿ ಜೇಸಿ ಮತ್ತು ಜೆಜೆಸಿ ಸಮ್ಮೇಳನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ಜೂನಿಯರ್ ಜೆಸಿ ಹಾಗೂ ಲೇಡಿ ಜೇಸಿ ಸಮ್ಮೇಳನವು ಬೈಂದೂರಿನಲ್ಲಿ ನಡೆಯಿತು.

ಸಮ್ಮೇಳನದಲ್ಲಿ ಬೆಳ್ತಂಗಡಿ ಜೆಸಿಯ ಜೂನಿಯರ್ ಜೆಸಿ ವಿಭಾಗಕ್ಕೆ ವಲಯದ ಅತ್ಯುತ್ತಮ ಜೆಜೆಸಿ ವಿಭಾಗ ಹಾಗೂ ಲೇಡಿ ಜೆಸಿ ವಿಭಾಗಕ್ಕೆ ಅತ್ಯುತ್ತಮ ರನ್ನರ್ ಪ್ರಶಸ್ತಿ ಹಾಗೂ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಆ ಪ್ರಯುಕ್ತ ನಡೆದ ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ JFM ರಂಜಿತ್ ಎಚ್ ಡಿ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಈ ನಡೆದ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಮಾರ್ಗದರ್ಶನವನ್ನು ಮಾಡಿದ ನಿಕಟ ಪೂರ್ವ ಅಧ್ಯಕ್ಷರಿಗೆ, ಪೂರ್ವಾಧ್ಯಕ್ಷರುಗಳಿಗೆ ಹಾಗೂ ಸಹಕಾರವನ್ನು ನೀಡಿದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಧನ್ಯವಾದವನ್ನು ಸಲ್ಲಿಸಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನೂತನ ಕಾರ್ಯದರ್ಶಿಗಳಾದ, ಜೆಸಿಐ ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಹಾಗೂ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ ಪೂರ್ವ ಅಧ್ಯಕ್ಷರಾದ ಸ್ವರೂಪ್ ಶೇಖರ್ ಇವರುಗಳನ್ನು ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಹೊಸ ಜೆಸಿ ಸದಸ್ಯರಾಗಿ ಪೂರ್ವ ಅಧ್ಯಕ್ಷರಾದ ಶ್ರೀನಾಥ್ ರವರ ಮಕ್ಕಳಾದ ಆಧ್ಯಾತ್ಮಿ ಕೆ ಎಸ್, ಹಾಗೂ ಜೆಜೆಸಿ ಸದಸ್ಯರಾಗಿ ಅದ್ವಿತಿ ಯವರು ಸೇರ್ಪಡೆಗೊಂಡರು. ಇವರಿಗೆ ವಲಯ ಉಪಾಧ್ಯಕ್ಷರಾದ ಶಂಕರ್ ರಾವ್ ರವರು ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರುಗಳಾದ ಅಶೋಕ ಕುಮಾರ್ ಬಿ ಪಿ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ ಮ್,ಚಿದಾನಂದ ಇಡ್ಯಾ, ಪ್ರಶಾಂತ್ ಲಾಯಿಲ, ಪ್ರಸಾದ್ ಬಿ ಎಸ್, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಸುದೀರ್ ಕೆಎನ್, ಶೈಲೇಶ್, ಲೇಡಿ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್, ಕೋಶಾಧಿಕಾರಿಗಳಾದ ಮಮಿತಾ ಸುಧೀರ್, ಕಾರ್ಯಕ್ರಮದ ಸಂಯೋಜಕರಾದ ಪ್ರಮೋದ್, ಪದಾಧಿಕಾರಿಗಳಾದ ಮಧುರಾ ರಾಘವ್, ರಜತ್, ಜಯರಾಜ್ ನಡಕರ, ರತ್ನಾಕರ ಬಳಂಜ, ವಿನಾಯಕ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಜೂನಿಯರ್ ಜೆಸಿ ಸಮ್ಮೇಳನದ ಸಂಯೋಜಕರಾದ ದೀಪ್ತಿ ಕುಲಾಲ್, ತೇಜಸ್, ಅತಿಶ್ರೇಯಾ, ಸೃಜನ್, ನಯನ, ಉದಿತ್ ರವರು ಭಾಗವಹಿಸಿದರು.

ವೇದಿಕೆ ಆಹ್ವಾನವನ್ನು ಜೊತೆ ಕಾರ್ಯದರ್ಶಿಗಳಾದ ರಾಮಕೃಷ್ಣ ನಡೆಸಿದರು ಮತ್ತು ಜೆಸಿ ವಾಣಿಯನ್ನು ಜೆಜೆಸಿ ತ್ರಿಷಾ ಉದ್ಘೋಷಿಸಿದರು . ಕಾರ್ಯದರ್ಶಿಗಳಾದ ಅನುದೀಪ್ ಜೈನ್ ರವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Related posts

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ಉಜಿರೆ ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಕ್ಕೆ ಅತ್ಯುತ್ತಮ ‘ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್-2024’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈಯವರಿಗೆ ಪ್ರಶಸ್ತಿ ಹಸ್ತಾಂತರ

Suddi Udaya

ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 11 ಕೆಜಿ 365 ಗ್ರಾಂ ಗಾಂಜಾ ಹಾಗೂ 42.57 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುಗಳ ವಿಲೇವಾರಿ

Suddi Udaya

ರಾಜಕೀಯ ಪ್ರೇರಿತವಾಗಿ ಶಾಸಕ ಹರೀಶ್ ಪೂಂಜರನ್ನು ಪೊಲೀಸರು ಬಂಧಿಸಿದರೆ ಉಗ್ರ ಹೋರಾಟ: ಕಟೀಲ್

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಕ್ಕಡ ವಲಯದಲ್ಲಿ ಸಿದ್ಧಿವಿನಾಯಕ ಹೊಸ ಸಂಘ ರಚನೆ

Suddi Udaya

ಪಶುಪರಿವೀಕ್ಷಕ ಹಲ್ಲೆ ಆರೋಪ; ಪಟ್ರಮೆಯ ನಿವಾಸಿ ಕುಸಿದು ಬಿದ್ದು ಮೃತ್ಯು

Suddi Udaya
error: Content is protected !!