31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷಿ ವಾರ್ಷಿಕ ಯೋಜನೆಗಳ ಗ್ರಾಮ ವಿಕಾಸಕ್ಕೆ ಆಯ್ಕೆಯಾದ ಮೊಗ್ರು ಗ್ರಾಮ

ಮೊಗ್ರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷಿ ವಾರ್ಷಿಕ ಯೋಜನೆಗಳಲ್ಲಿ ಒಂದಾದ ಗ್ರಾಮ ವಿಕಾಸ. ವಿದ್ಯಾವರ್ಧಕ ಸಂಘದ ಸಹ ಸಂಸ್ಥೆಯಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ನೇತೃತ್ವದಲ್ಲಿ ಗ್ರಾಮ ವಿಕಾಸಕ್ಕೆ ಆಯ್ಕೆಯಾದ ಗ್ರಾಮ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮ.

ಕಳೆದ ಒಂದು ವರ್ಷದಿಂದ ಗ್ರಾಮ ವಿಕಾಸ ಸಮಿತಿಯು ಯೋಜನೆಗಳನ್ನು ರೂಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಮಕ್ಕಳನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ.

ಜು.26ರಂದು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಾವೇ ತಯಾರಿಸಿದ “ಸೀಡ್ ಬಾಲ್” ಹಾಗೂ ಗಿಡಗಳನ್ನು ಮೊಗ್ರು ಗ್ರಾಮದ ಅಲೆಕ್ಕಿ ಎಂಬಲ್ಲಿ ಅಲ್ಲಲ್ಲಿ ಭೂಮಿಗೆ ಬಿಸಾಡುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಜೊತೆಗೆ ಗ್ರಾಮ ವಿಕಾಸ್ ತಂಡದ ಸದಸ್ಯರಾದ ಶಶಿಕಲಾ ಜಿ. ಬಾಂಕ್ಯ, ಶಿಕ್ಷಕರಾದ ವಿದ್ಯಾ ಹಾಗೂ ಜ್ಯೋತಿಕಿರಣ್ ಉಪಸ್ಥಿತರಿದ್ದರು ಅಲೆಕ್ಕಿ ಶ್ರೀರಾಮ ಶಿಶುಮಂದಿರದ ಮಾತಾಜಿ ಹಾಗೂ ಆಡಳಿತ ಸಮಿತಿಯ ಸದಸ್ಯರು ಸಹಕರಿಸಿದರು.

Related posts

ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಯುವನಾಯಕ ಹರೀಶ್ ಕೆ ಬೈಲಬರಿ ಬಳಂಜ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಲು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಬೆಳ್ತಂಗಡಿ ತಾಲ್ಲೂಕಿನ ವಿವಿಧ ಚಚ್೯ಗಳಿಗೆ ಭೇಟಿ ನೀಡಿ, ಮತ ಯಾಚಿಸಿದ ಹರೀಶ್ ಪೂಂಜ

Suddi Udaya

ನಡ: ಹೊಕ್ಕಿಲ ನಿವಾಸಿ ಕುಸುಮ ನಿಧನ

Suddi Udaya

ಕಳೆಂಜ: ನಡುಜಾರ್ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ: ವಿಜಯ ಕುಮಾರ್ ಜೈನ್ ಹಾಗೂ ಅರುಣ್ ಕುಮಾರ್ ಜೈನ್ ರವರಿಂದ ಒಂದೇ ದಿನ 22 ದೇವಸ್ಥಾನ, ಬಸದಿ, ದೈವಸ್ಥಾನ ಹಾಗೂ ಮಂದಿರ ಭೇಟಿ

Suddi Udaya
error: Content is protected !!