38.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಮಹಾಸಭೆ

ಬೆಳ್ತಂಗಡಿ: 2024-25ನೇ ಶೈಕ್ಷಕಣಿಕ ವರ್ಷದ ರಕ್ಷಕ ಶಿಕ್ಷಕ ಮಹಾಸಭೆ ಸಂತ ತೆರೇಸಾ ಪ್ರೌಢಶಾಲೆಯ ಸಭಾಂಗಣದಲ್ಲಿ ಜು.27ರಂದು ನಡೆಯಿತು.

ಜೀವನ ಶಿಕ್ಷಣ ನೀಡೋಣ ಮಕ್ಕಳ ಬಾಳು ಬೆಳಗಿಸೋಣ ಎಂಬ ಧ್ಯೇಯದೊಂದಿಗೆ ಆರಂಭಿಸಿದ ಈ ಶೈಕ್ಷಣಿಕ ವರ್ಷ ಪೋಷಕರ, ಶಿಕ್ಷಕ ವೃಂದದ ಅವಿರತ ಬೆಂಬಲದಿಂದ ಕಳೆದ ೬೦ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸಂತ ತೆರೇಸಾ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದೆ. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ನಮ್ಮ ಶಾಲಾ ಸಂಚಾಲಕಿ ವಂದನೀಯ ಭಗಿನಿ ತೆರೇಸಿಯಾ ಸೆರಾರವರು ಪೋಷಕರ ಬೆಂಬಲನ್ನು ಸ್ಮರಿಸಿ, ಆಡಳಿತ ಮಂಡಳಿಯ ಶುಭಾಶಯ ನೀಡಿ ಶಿಕ್ಷಕ ವೃಂದದ ಅವಿರತ ಪ್ರಯತ್ನವನ್ನು ಶ್ಲಾಘಿಸಿದರು.

ಸಂಪನ್ಮೂಲ ವ್ಯಕ್ತಿ ಸುನೀಲ್ ಪಿ ಜಿ ಜೀವಶಾಸ್ತ್ರ ಉಪನ್ಯಾಸಕರು ಇದೇ ಶಾಲೆಯ ವಿದ್ಯಾರ್ಥಿಯಾಗಿ ಅವರ ಅಮೂಲ್ಯ ಅನುಭವವನ್ನು ಹಂಚುವ ಮೂಲಕ ಸರ್ವರ ಮನ ಮುಟ್ಟುವಂತೆ ಪ್ರಚಲಿತ ಸಮಸ್ಯೆ ಮೊಬೈಲ್ ದುಶ್ಚಟಗಳು ಹಿರಿಯರಿಗೆ ಗೌರವ ನೀಡುವ ತತ್ವಗಳನ್ನು ತಿಳಿಸಿದರು.

ಹದಿಹರೆಯ ಪ್ರಾಯ ಸುಂದರ ಆದರೆ ಕುದಿಯುವ ಪ್ರಾಯ. ನಾವು ಹೇಳುವ ವಿಚಾರಗಳಿಗಿಂತ ಮಾಡುವ ವಿಚಾರಗಳನ್ನು ಅನುಕರಣೆ ಮಾಡಿಕೊಳ್ಳುತ್ತಾರೆ. ನಮ್ಮ ಅಪ್ಪಂದಿರು ಹೀರೋ ಮತ್ತು ಅಮ್ಮಂದಿರು ಹಿರೋಹಿನ್‌ಗಳಾಗಬೇಕು. ಮಕ್ಕಳಿಗೆ ಎಲ್ಲಾ ಅಯಾಮಗಳನ್ನು ತೋರಿಸಿ, ಆಗ ಮಾತ್ರ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಸರಳ ಉದಾಹರಣೆಗಳಿಂದ ಎಳೆ ಎಳೆಯಾಗಿ ತಿಳಿಸಿದರು.

ಆಡಳಿತ ಮಂಡಳಿ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಧ್ಯೇಯ ಭ್ರಾತೃತ್ವ ಎಂಬ ವಿಷಯವನ್ನು ಉದ್ಘಾಟನೆಯನ್ನು ವೇದಿಕೆಯಲ್ಲಿರುವ ಗಣ್ಯರು ಭಾರತದ ಸಂವಿಧಾನದ ದಾಖಲೆಗಳನ್ನು ಅಲಂಕರಿಸಿದ ವೇದಿಕೆಯಲ್ಲಿರಿಸುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಕಳೆದ ರಕ್ಷಕ ಶಿಕ್ಷಕ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಶಿಕ್ಷಕಿ ನಿಶಾರವರು ಸಭೆಯಲ್ಲಿ ಮಂಡಿಸಿದರು.
2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ತಥಮ ಸ್ಥಾನ ಪಡೆದ ಕನ್ನಡ ಮಾಧ್ಯಮದ ಯಶಸ್ವಿ, ಆಂಗ್ಲ ಮಾಧ್ಯಮದ ಸಮೀಕ್ಷರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾರಾಯಣ ಶೆಟ್ಟಿ, ಸಂತ ತೆರೇಸಾ ಪದವಿಪೂರ್ವ ಕಾಲೇಜು, ಪ್ರಾಂಶುಪಾಲರು ವಂದನೀಯ ಆರೋಗ್ಯರವರು ಉಪಸ್ಥಿತರಿದ್ದರು.

ವಂ. ಭಗಿನಿ ಜೆಸಿಂತಾ ಬರೆಟ್ಟೊ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ವಿನ್ಸೆಂಟ್ ವಂದಿಸಿದರು.

Related posts

ಚಾರ್ಮಾಡಿ ಮುಹಿದ್ದಿನ್ ಜುಮ್ಮಾ ಮಸೀದಿಗೆ ನುಗ್ಗಿದ ತಂಡದಿಂದ ಧರ್ಮಗುರುಗಳ ಮೇಲೆ ಹಲ್ಲೆ

Suddi Udaya

ಕನ್ಯಾಡಿ II, ದ. ಕ. ಜಿ. ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಪುದುವೆಟ್ಟು ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ಉಜಿರೆ ಆದಿನಾಗ ಬ್ರಹ್ಮ ಮೊಗೇರ್ಕಳ ದೇವಸ್ಥಾನದಿಂದ ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ ತಾಲೂಕು ಮಟ್ಟದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೆ-ಮೆರವಣಿಗೆ

Suddi Udaya

ಬೆಳ್ತಂಗಡಿ: ಆಳ್ವಾಸ್ ಪ್ರಗತಿ, ಬೃಹತ್ ಉದ್ಯೋಗ ಮಾಹಿತಿ ಶಿಬಿರ; ಶಾಸಕ ಹರೀಶ್ ಪೂಂಜರವರಿಂದ ಚಾಲನೆ

Suddi Udaya
error: Content is protected !!