ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ/ಲಾಯಿಲ ವಲಯ ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲಾಲ ವಲಯ, ವಲಯ ಜನಜಾಗೃತಿ ವೇದಿಕೆ, ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ಭಜನಾ ಪರಿಷತ್ ಇವುಗಳ ಜಂಟಿ ಆಶ್ರಯದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ|| ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ “ಎನೇಲ್ ಗೊಬ್ಬು” ಕ್ರೀಡಾಕೂಟವು ಜು.28ರಂದು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಕ್ರೀಡಾಂಗಣದಲ್ಲಿ ಜರುಗಿತು ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್‌ನ ಕಾರ್ಯನಿರ್ವಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ನೆರವೇರಿಸಿದರು.
ಕ್ರೀಡಾಕೂಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಭೋಜ ಮಲೆಕುಡಿಯ ಲಾಯಿಲ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷರಾದ ರಕ್ಷಿತ್ ಶಿವರಾಮ್. ವಲಯ ಪ್ರಗತಿ ಬಂದು ಒಕ್ಕೂಟದ ಅಧ್ಯಕ್ಷರಾದ ಬಿಎ ರಜಾಕ್.ಬೆಳ್ತಂಗಡಿ ವಲಯ ಅಧ್ಯಕ್ಷರು ಜನಜಾಗ್ರತಿ ವೇದಿಕೆ ಪುರುಷೋತ್ತಮ ಕನ್ನಾಜೆ. ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಸಹ ಶಿಕ್ಷಕಿ ಪ್ರಮೀಳಾ. ನಿವೃತ್ತ ಸೈನಿಕರು ಗಣೇಶ್ ಬಿ. ಎಲ್ ಉಪಸ್ಥಿತರಿದ್ದರು.
ಕೇಂದ್ರ ಪ್ರ.ಬಂ. ಸ್ವ-ಸಹಾಯ ಸಂಘಗಳ ಬೆಳ್ತಂಗಡಿ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಸ್ವಾಗತಿಸಿ ಕಾರ್ಯಕ್ರಮ ಸಚಿನ್ ಗೇರುಕಟ್ಟೆ ನಿರೂಪಿಸಿದರು.
ಸ್ಪರ್ಧೆಗಳು:ಮಕ್ಕಳಿಗೆ: 100ಮೀ. ಓಟ, ಅಡಿಕೆಹಾಳೆ ಎಳೆಯುವುದು, ನಿಧಿ ಹುಡುಕುವುದುಮಹಿಳೆಯರಿಗೆ: ಹಗ್ಗಜಗ್ಗಾಟ, ಅಡಿಕೆಹಾಳೆ ಎಳೆಯುವುದು, ಗುಂಡೆಸೆತ, ನಿಧಿ ಹುಡುಕುವುದು, ಗೂಟದ ಓಟ, ತ್ರೋಬಾಲ್, ಸಂಧಿ ಪಾಡ್ದನ, ಸಂಗೀತ ಕುರ್ಚಿ.ಪುರುಷರಿಗೆ: ಹಗ್ಗಜಗ್ಗಾಟ, ಅಡಿಕೆಹಾಳೆ ಎಳೆಯುವುದು, ಗುಂಡೆಸೆತ, ನಿಧಿ ಹುಡುಕುವುದು, ಗೂಟದ ಓಟ, ವಾಲಿಬಾಲ್, ಕಬಡ್ಡಿ, ಪಟ್ಟಣಕ್ಕೆ ಬಾಂಬ್ ಸ್ಪರ್ಧೆಗಳ ನಡೆಯಲಿರುವುದು.