37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಜೇಸಿಐ ವಲಯ 15ರ ತಾತ್ಕಾಲಿಕ ವಲಯ ತರಬೇತುದಾರರಾಗಿ ಚಂದ್ರಹಾಸ ಬಳಂಜ ಆಯ್ಕೆ

ವ್ಯಕ್ತಿತ್ವ ವಿಕಸನಕ್ಕೆ ಹೆಸರಾದ ಅಂತರಾಷ್ಟ್ರೀಯ ಸಂಸ್ಥೆ ಜೇಸಿಐನ ವಲಯ 15 ರ ವಲಯ ತರಬೇತುದಾರರ ತರಬೇತಿ ಕಾರ್ಯಗಾರ ಜುಲೈ 18 ರಿಂದ 21 ರ ತನಕ ಜೇಸಿಐ ಕಾಪುವಿನ ಆತಿಥ್ಯದಲ್ಲಿ ಕಾಪುವಿನಲ್ಲಿ ನಡೆದಿದ್ದು ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಉಪಾಧ್ಯಕ್ಷರಾದ ಚಂದ್ರಹಾಸ ಬಳಂಜ ಭಾಗವಹಿಸಿ ಉತ್ತೀರ್ಣರಾಗಿ ತಾತ್ಕಾಲಿಕ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಗೋವಾ, ಆಂಧ್ರಪ್ರದೇಶ, ಕೇರಳ ಹೀಗೆ ವಿವಿಧ ಕಡೆಯಿಂದ ಜೇಸಿಐ ಸದಸ್ಯರು ಇದರಲ್ಲಿ ಭಾಗವಹಿಸಿದ್ದು ಇದು ಜೇಸಿಐ ನ ಅತ್ಯುತ್ತಮ ತರಬೇತಿ ಕಾರ್ಯಗಾರದಲ್ಲಿ ಒಂದಾಗಿದೆ.


ಜೇಸಿಐನ ಸಕ್ರೀಯ ಸದಸ್ಯರಾಗಿರುವ ಇವರು ಇದರೊಂದಿಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕ್ಕೊಂಡಿದ್ದಾರೆ.

ಪುಣ್ಕೆದೊಟ್ಟು ಶ್ರೀಧರ ಪೂಜಾರಿ, ಸುಶೀಲ ದಂಪತಿಗಳ ಪುತ್ರರಾಗಿರುವ ಇವರು ಬಹುಮುಖ ಪ್ರತಿಭೆಯಾಗಿದ್ದು ನಿರೂಪಣೆ, ಭಾಷಣ, ಬರವಣಿಗೆ, ನಟ, ನೃತ್ಯಪಟು, ಕುಣಿತ ಭಜನೆ, ತೀರ್ಪುಗಾರಿಕೆ ಕಾರ್ಯಕ್ರಮ ಸಂಯೋಜನೆ ಎಲ್ಲಾ ವಿಭಾಗದಲ್ಲಿ ಕೂಡ ಸೈ ಎನಿಸಿಕ್ಕೊಂಡಿದ್ದು ಹೀಗಾಗಲೆ ಜಿಲ್ಲೆಯಾದ್ಯಾಂತ ಶಾಲಾ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಹಲವಾರು ತರಬೇತಿ ನಡೆಸಿದ ಅನುಭವವನ್ನು ಪಡೆದಿದ್ದಾರೆ.

Related posts

ಜ.4: ವಿದ್ವತ್ ಪಿ ಯು. ಕಾಲೇಜು ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ.

Suddi Udaya

ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಕಾಲುಗಳನ್ನು ತೊಳೆದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್

Suddi Udaya

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಸಮಿತಿಗಳ ವತಿಯಿಂದ ‘ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ’ ಪ್ರತಿಭಟನೆ

Suddi Udaya

ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ, ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ ಬಗ್ಗೆ ಕಾರ್ಯಕ್ರಮ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya
error: Content is protected !!