24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪಂತ ವಲಯದ ತೆಕ್ಕಾರು ಕಾರ್ಯಕ್ಷೇತ್ರದ ಒಕ್ಕೂಟದ ಪದಗ್ರಹಣ ಸಮಾರಂಭ

ಬಡ ಜನರ ಹಾಗು ಮದ್ಯಮ ವರ್ಗದ ಜನರ ಬದುಕನ್ನು ಯೋಜನೆಯ ಮೂಲಕ ಕಟ್ಟುವುದರ ಜೊತೆಗೆ, ಬಡವರ ಬದುಕಿಗೆ ಹೊಸ ರೂಪ ನೀಡುವ ಕೈಂಕರ್ಯ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಮಂಜುನಾಥೇಶ್ವರ ಬಜಾನಾ ಪರಿಷತ್ತು ಪುತ್ತೂರು ಅಧ್ಯಕ್ಷ ಲೋಕೇಶ್ ಬೇತ್ತೋಡಿ ಹೇಳಿದರು. ತಮ್ಮಲ್ಲಿರುವ ದುರ್ಗುಣಗಳನ್ನು ತ್ಯಜಿಸಿ ಒಕ್ಕೂಟದ ಪದಾಧಿಕಾರಿಗಳು ಸೇವೆಯನ್ನು ಸಲ್ಲಿಸಬೇಕು ಮಕ್ಕಳಿಗೆ ಸಂಸ್ಕಾರ ಹಾಗು ಸಂಸ್ಕೃತಿಯ ಕೊರತೆ ಇದೆ ಯುವ ಜನಾಂಗ ದಾರಿ ತಪ್ಪದಂತೆ ಎಚ್ಚರಿಕೆ ವಹಿಸಬೇಕು ಜವಾಬ್ದಾರಿಯ ಜೊತೆಗೆ ನಡವಳಿಕೆ ಕೂಡಾ ಬಹಳ ಮುಖ್ಯ ಸಮಾಜಕ್ಕೆ ಮಾದರಿಯಾದ ಕೆಲಸ ಕಾರ್ಯಗಳನ್ನ ಮಾಡಿದಾಗ ಜನರು ಗುರುತಿಸುತ್ತಾರೆ ಈ ನಿಟ್ಟಿನಲ್ಲಿ ಒಕ್ಕೂಟಗಳು ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕೂ ಎಂದು ಕರೆ ನೀಡಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ವಲಯದ ತೆಕ್ಕಾರು ಕಾರ್ಯಕ್ಷೇತ್ರದಲ್ಲಿ ನೂತನವಾಗಿ ರಚನೆಯಾದ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಪರಸ್ಪರ ಅವಲಂಬನೆಯ ಮೂಲಕ ಸ್ವಾಲಂಬನೆಯ ಬದುಕನನ್ನ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮುಖೇನ ಗುಂಪಿನ ಸದಸ್ಯರು ಬದುಕಿನಲ್ಲಿ ಅಭಿವೃದ್ಧಿಯಾಗುತ್ತಿರುವುದು ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸರ್ವ ಧರ್ಮದ ಸಮಾಗಮವೇ ಯೋಜನೆಯ ವಿಶೇಷತೆ, ಉಳಿತಾಯದ ಮನೋಭಾವನೆಯನ್ನ ಬೆಳೆಸಿದ ಪರಿಣಾಮ ಜನರಲ್ಲಿ ಅರ್ಥಿಕ ಭದ್ರತೆಗೆ ಬುನಾದಿ ಹಾಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತೆಕ್ಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ ರಜಾಕ್ ರವರು ಗ್ರಾಮೀಣ ಭಾಗದಲ್ಲಿರುವ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಪೂಜ್ಯರು ಆರಂಭಿಸಿದ ಸಂಚಾರಿ ಅಸ್ಪತ್ರೆಯ ಸೇವೆಯಿಂದಾಗಿ ಆದ ಪ್ರಯೋಜವವನ್ನ ವಿವರಿಸಿದರು. ವೇದಿಕೆಯಲ್ಲಿ ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಪ್ರಭಾಕರ ಪಸಂದೋಡಿ, ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ಸ.ಹಿ ಪ್ರಾಥಮಿಕ ಶಾಲೆ ಕುಟ್ಟಿಕಳ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ನೂತನ ಅಧ್ಯಕ್ಷ ಪದ್ಮನಾಭ ಕಜೆಕೊಡಿ ಉಪಸ್ಥಿತರಿದ್ದರು.

ಸಭಾದ್ಯಕ್ಷತೆಯನ್ನು ತೆಕ್ಕಾರು ನಿಕಟ ಪೂರ್ವ ಅಧ್ಯಕ್ಷ ರಮೇಶ್ ಆನಲ್ಕೆ ವಹಿಸಿದ್ದರು. ವಲಯ ಮೇಲ್ವಿಚಾರಕ ಗುಣಕರ್ ನಿರೂಪಿಸಿದರು. ಸೇವಾ ಪ್ರತಿನಿಧಿ ಶಿವರಾಮ್ ವರದಿ ಮಂಡಿಸಿದರು.

Related posts

ಭಾರತೀಯ ಭೂ ಸೇನೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಗೌಡ: 20 ವರ್ಷಗಳಿಂದ ತುಂಡು ಭೂಮಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ

Suddi Udaya

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

Suddi Udaya

ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ ಪ್ರದಾನ

Suddi Udaya

ಪ್ರಧಾನಿ ನರೇಂದ್ರ ಮೋದಿಜಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಎರಡನೇ ಭಾರಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ

Suddi Udaya

ಹಿಂದೂ ರಾಷ್ಟ್ರದ ಉದ್ಘಾರದೊಂದಿಗೆ ಬಂಟ್ವಾಳದ ಸ್ಪರ್ಶಾ ಕಲಾಮಂದಿರದಲ್ಲಿ ಪ್ರಾರಂಭವಾದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ

Suddi Udaya
error: Content is protected !!