ಬೆಳ್ತಂಗಡಿ : ಗೇರುಕಟ್ಟೆ ಸರಕಾರಿ ಫ್ರೌಡ ಶಾಲಾ ಪಕ್ಕದಲ್ಲಿಯೇ ಮಾರಕ ಡೆಂಗ್ಯೂ,ಮಲೇರಿಯಾ ಹರಡುವ ಕೇಂದ್ರ ಪರಿಸರ ಸೃಷ್ಟಿಯಾಗಿದೆ. ಕಳೆದ ಒಂದೆರಡು ತಿಂಗಳಿನಿಂದ ರಸ್ತೆಯ ಚರಂಡಿ ಮುಚ್ಚಿ ಭಾರೀ ಮಳೆಯ ನೀರು ಹೋಗಲು ವ್ಯವಸ್ಥೆಯಿಲ್ಲದೆ ಕೆಸರು ಕೊಳೆತ ಕಸಕಡ್ಡಿ ಶೇಖರಣೆಯಾಗಿ ಗಬ್ಬು ವಾಸನೆ ಬರುತ್ತದೆ.
ನೂರಾರು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ನಿತ್ಯ ಓಡಾಡುವ ಪರಿಸರದಲ್ಲಿ ಮಾರಕ ಡೆಂಗ್ಯೂ, ಮಲೇರಿಯಾ ಕಾಯಿಲೆಗೆ ಆಹ್ವಾನಿಸುವಂತಿದೆ. ಶಾಲಾ ಶಿಕ್ಷಕರು, ಮೇಲುಸ್ತುವಾರಿ ಸಮಿತಿಯವರು,ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮಕ್ಕಳ ಪೋಷಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಶಾಲಾ ಪರಿಸರದಲ್ಲಿ ಸ್ವಚ್ಛತೆಗಾಗಿ ಆಧ್ಯತೆ ನೀಡಿ,ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಮಾಡದೇ ತಕ್ಷಣ ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹಿಸಿದರು.
ವರದಿ: ಕೆ.ಎನ್ ಗೌಡ